ಪಂಜಾಬ್ ಗೆ ಭರ್ಜರಿ ಜಯ, ಮನ್ ದೀಪ್ ಸಿಂಗ್, ಕ್ರಿಸ್ ಗೇಲ್ ಅರ್ಧ ಶತಕ

Update: 2020-10-26 17:55 GMT

ಶಾರ್ಜಾ: ಮನ್ ದೀಪ್ ಸಿಂಗ್ (66) ಹಾಗೂ ಕ್ರಿಸ್ ಗೇಲ್ (51) ಅರ್ಧ ಶತಕದ ಕೊಡುಗೆ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಮವಾರ ನಡೆದ 46ನೇ ಐಪಿಎಲ್ ಲೀಗ್ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ಗೆಲ್ಲಲು 150 ರನ್ ಗುರಿ ಬೆನ್ನಟ್ಟಿದ ಪಂಜಾಬ್ 18.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ನಾಯಕ ರಾಹುಲ್ 28 ರನ್ ಗಳಿಸಿ ಔಟಾದರು. ಆಗ  ಆರಂಭಿಕ ಆಟಗಾರ ಮನ್ ದೀಪ್ ಸಿಂಗ್ (ಔಟಾಗದೆ 66, 56 ಎಸೆತ, 8 ಬೌಂಡರಿ, 2 ಸಿಕ್ಸರ್) ತಾಳ್ಮೆಯ ಆಟ ಹಾಗೂ ಕ್ರಿಸ್ ಗೇಲ್ (51, 29 ಎಸೆತ, 2 ಬೌಂಡರಿ, 5 ಸಿಕ್ಸರ್ )ಅಬ್ಬರದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಗೆಲುವಿನ ನಗೆ ಬೀರಿತು.

ಕೆಕೆಆರ್ ಪರವಾಗಿ ವರುಣ್(1-34) ಹಾಗೂ ಫರ್ಗುಸನ್(1-32) ತಲಾ ಎರಡುವಿಕೆಟ್ ಪಡೆದರು.

ಇದಕ್ಕೂ ಮೊದಲು  ಮೊಹಮ್ಮದ್ ಶಮಿ(3-35) ನೇತೃತ್ವದ ಪಂಜಾಬ್ ಬೌಲರ್ ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ಹೊರತಾಗಿಯೂ ಆರಂಭಿಕ ಆಟಗಾರ ಶುಭಮನ್ ಗಿಲ್ (57, 45 ಎಸೆತ) ಹಾಗೂ ನಾಯಕ ಇಯಾನ್ ಮೊರ್ಗನ್(40,25 ಎಸೆತ)ಸಾಹಸದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಿಗದಿತ 20  ಓವರ್ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 149 ರನ್ ಗಳಿಸಿತು. ಪಂಜಾಬ್ ಗೆಲುವಿಗೆ 150 ರನ್ ಗುರಿ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News