ಸತತ 2ನೇ ಬಾರಿ ಕೊಲೋನ್ ಪ್ರಶಸ್ತಿ ಬಾಚಿಕೊಂಡ ಝ್ವೆರೆವ್

Update: 2020-10-26 18:21 GMT

ಸತತ 2ನೇ ಬಾರಿ ಕೊಲೋನ್ ಪ್ರಶಸ್ತಿ ಬಾಚಿಕೊಂಡ ಝ್ವೆರೆವ್ ಕೊಲೋನ್, ಅ26: ಅಲೆಕ್ಸಾಂಡರ್ ಝ್ವೆರೆವ್ ರವಿವಾರ ಒಂದು ವಾರದಲ್ಲಿ ಕಲೋನ್‌ನಲ್ಲಿ ತನ್ನ ಎರಡನೇ ಎಟಿಪಿ ಒಳಾಂಗಣ ಪ್ರಶಸ್ತಿಯನ್ನು ಪಡೆದರು

 ಅರ್ಜೆಂಟೀನದ ಡಿಗೋ ಶ್ವಾರ್ಟ್‌ಜ್ಮನ್ ವಿರುದ್ಧ ಪ್ರಬಲ ಮತ್ತು ನೇರ ಸೆಟ್‌ಗಳ ಗೆಲುವು ಸಾಧಿಸಿದರು.

 ಝ್ವೆರೆವ್ ಅವರು ಶ್ವಾರ್ಟ್ಜ್‌ಮನ್ ವಿರುದ್ಧ  ತನ್ನ ಹಿಂದಿನ ಮೂರು ಮುಖಾಮುಖಿಯಲ್ಲಿ ಎರಡನ್ನು ಕಳೆದುಕೊಂಡಿದ್ದರು. ಆದರೆ ರವಿವಾರ ಅರ್ಜೆಂಟೀನದ ಆಟಗಾರನನ್ನು 6-2, 6-1ರಿಂದ ಮಣಿಸಿದರು. ಕೇವಲ ಒಂದು ಗಂಟೆ 11 ನಿಮಿಷಗಳಲ್ಲಿ ಇವರ ಹಣಾಹಣಿ ಕೊನೆಗೊಂಡಿತು. ಅಲೆಕ್ಸಾಂಡರ್ ಇಂದು ನನಗಿಂತ ಉತ್ತಮವಾಗಿದ್ದರು. ಅವರು ಟೆನಿಸ್ ಕೋರ್ಟ್‌ನಲ್ಲಿ ಪರಿಪೂರ್ಣರಾಗಿದ್ದರು ಎಂದು ಶ್ವಾರ್ಟ್ಜ್ ಮನ್‌ಹೇಳಿದರು.

ವಿಶ್ವದ ಏಳನೇ ಕ್ರಮಾಂಕದ ಝ್ವೆರೆವ್ ತನ್ನ ತವರು ಜರ್ಮನಿಯಲ್ಲಿ ನಡೆದ ಎರಡು ಪಂದ್ಯಾವಳಿಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

 ‘‘ಎರಡು ದಿನಗಳ ಹಿಂದೆ ನಾನು ಪಂದ್ಯಾವಳಿಯಲ್ಲಿ ಫೈನಲ್ ತಲುಪುತ್ತೇನೆ ಎಂಬ ಖಾತ್ರಿ ನನಗಿರಲಿಲ್ಲ. ಆದರೆ ಇದೀಗ ಫೈನಲ್ ತಲುಪಿ ಪ್ರಶಸ್ತಿ ಪಡೆದಿರುವುದಾಗಿ ಅವರು ಹೇಳಿದರು. ಝ್ವೆರೆವ್ ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯಲಿರುವ ಎಟಿಪಿ ಫೈನಲ್ಸ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಅಲ್ಲಿ ಅವರು 2018 ರಲ್ಲಿ ಮೊದಲ ಬಾರಿ ಪ್ರಶಸ್ತಿ ಜಯಿಸಿದ್ದರು. ಎರಡನೇ ಬಾರಿ ಪ್ರಶಸ್ತಿಯನ್ನು ಪಡೆಯಲು ಹೊರಾಟ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News