ಸಂಘಟಿತ ಹೋರಾಟ: ಡೆಲ್ಲಿ ವಿರುದ್ಧ ಹೈದರಬಾದ್ ಗೆ 88 ರನ್ ಗಳ ಭರ್ಜರಿ ಗೆಲುವು

Update: 2020-10-27 17:48 GMT

ದುಬೈ, ಅ.27: ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಸಂಘಟಿತ ಹೋರಾಟ ಪ್ರದರ್ಶಿಸಿದ ಹೈದರಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 88 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಗೆಲುವಿಗೆ 220 ರನ್ ಗಳ ಕಠಿಣ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ ಗಳಲ್ಲಿ 131 ರನ್ ಗೆ ಅಲೌಟಾಗಿ ಸೋಲೊಪ್ಪಿಕೊಂಡಿತು. ರಿಷಬ್ ಪಂತ್ 36, ಅಜಿಂಕ್ಯ ರಹಾನೆ 26 ರನ್ ಗಳಿಸಿದರು.

ಹೈದರಬಾದ್ ಪರ ರಶೀದ್ ಖಾನ್ ಅದ್ಭುತ ಬೌಲಿಂಗ್ ಮಾಡಿದರು. ನಾಲ್ಕು ಓವರ್ ಎಸೆದ ಅವರು ಕೇವಲ 7 ರನ್ ನೀಡಿದ ಪ್ರಮುಖ 3 ವಿಕೆಟ್ ಕಬಳಿಸಿದರು. ಉಳಿದಂತೆ ಸಂದೀಪ್ ಶರ್ಮಾ 2, ನಟರಾಜನ್ 2, ಶಾಬಾಝ್ ನದೀಮ್, ಶಂಕರ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಹೈದರಬಾದ್ ತಂಡ ಭರ್ಜರಿ ಬ್ಯಾಟಿಂಗ್ ಮೂಲಕ ನಿಗದಿತ 20 ಓವರ್ ಗಳಲ್ಲಿ 219 ರನ್ ಗಳನ್ನು ಗಳಿಸಿತು. ನಾಯಕ ಡೇವಿಡ್ ವಾರ್ನರ್ 66(34 ಎಸೆತ) ವೃದ್ಧಿಮಾನ್ ಸಾಹಾ 87(45 ಎಸೆತ) ಮನೀಶ್ ಪಾಂಡೆ 44 (31 ಎಸೆತ) ರನ್ ಗಳಿಸಿದರು.

ಈ ಮೂಲಕ ಅಯ್ಯರ್ ಬಳಗಕ್ಕೆ ಹ್ಯಾಟ್ರಿಕ್ ಸೋಲುಂಟಾಗಿದ್ದು, ಹೈದರಬಾದ್ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಒಟ್ಟು 12 ಪಂದ್ಯಗಳನ್ನಾಡಿರುವ ವಾರ್ನರ್ ಪಡೆ 5ರಲ್ಲಿ ಗೆಲುವು ಸಾಧಿಸಿದೆ. ಡೆಲ್ಲಿ 12 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಮೂರನೇ ಸ್ಥಾನದಲ್ಲಿದೆ.

ಸನ್‌ರೈಸರ್ಸ್‌ಗೆ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯದಲ್ಲಿ ಜಯ ಅನಿವಾರ್ಯತ್ತು. ಹೀಗಾಗಿ ಪ್ರಬಲ ಹೋರಾಟ ಪ್ರದರ್ಶಿಸಿ ಗೆಲುವು ಸಾಧಿಸಿದೆ. ಉತ್ತಮ ಆಟದ ಮೂಲಕ ಸಾಗುತ್ತಿದ್ದ ಡೆಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಕೋಲ್ಕತ್ತ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ಎದುರು ಸೋತು ನಿರಾಸೆಗೆ ಒಳಗಾಗಿತ್ತು. ಇಂದು ಹೈದರಬಾದ್ ವಿರುದ್ಧ ಸೋತು ಸೋಲಿನಲ್ಲಿ ಹ್ಯಾಟ್ರಿಕ್ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News