ಮಿಂಚಿದ ನಿತೀಶ್ ರಾಣಾ: ಚೆನ್ನೈ ಗೆಲುವಿಗೆ 173 ರನ್ ಗುರಿ ನೀಡಿದ ಕೆಕೆಆರ್
ದುಬೈ: ಆರಂಭಿಕ ಆಟಗಾರ ನಿತೀಶ್ ರಾಣಾ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಉತ್ತಮ ಮೊತ್ತ ದಾಖಲಿಸಿದ್ದು, ಚೆನ್ನೈ ಗೆಲುವಿಗೆ 173 ರನ್ ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನಿಗದಿತ 20 ಓವರ್ ಗಳಲ್ಲಿ 172/5 ರನ್ ಗಳಿಸಿತು.
ಆರಂಭಿಕ ಆಟಗಾರರಾದ ನಿತೀಶ್ ರಾಣಾ ಹಾಗೂ ಶುಭಮನ್ ಗಿಲ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಶುಭಮನ್ ಗಿಲ್ 26 (17 ಎಸೆತ) ಗಳಿಸಿ ಔಟಾದರೆ, ನಿತೀಶ್ ರಾಣಾ 87( 61 ಎಸೆತ) ರನ್ ಸಿಡಿಸಿದರು.
ದಿನೇಶ್ ಕಾರ್ತಿಕ್ 21, ನಾಯಕ ಇಯಾನ್ ಮಾರ್ಗನ್ 15 ರನ್ ಗಳಿಸಿದರು.
ಚೆನ್ನೈ ಪರ ಲುಂಗಿ ಗಿಡಿ 2, ಸ್ಯಾಂಟ್ನರ್, ಜಡೇಜಾ ಹಾಗೂ ಕರ್ನ್ ಶರ್ಮಾ ತಲಾ 1 ವಿಕೆಟ್ ಪಡೆದರು.
ಧೋನಿ ನಾಯಕತ್ವದ ಚೆನ್ನೈ ತಂಡ ಈಗಾಗಲೇ ಪ್ಲೇಆಫ್ ನಿಂದ ಹೊರಗುಳಿದಿದೆ. ಆದರೆ ಪ್ಲೇಆಫ್ ರೇಸ್ ನಲ್ಲಿರುವ ಕೊಲ್ಕತ್ತಾಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿದ್ದು, ಒಟ್ಟು 12 ಪಂದ್ಯಗಳನ್ನಾಡಿರುವ ಕೊಲ್ಕತ್ತಾ 6ರಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋತಿದೆ.