ಪಂಜಾಬ್ ಗೆಲುವಿನ ಓಟಕ್ಕೆ ರಾಜಸ್ಥಾನ್ ಬ್ರೇಕ್: ಸ್ಮಿತ್ ಪಡೆಗೆ 7 ವಿಕೆಟ್ ಗಳ ಗೆಲುವು

Update: 2020-10-30 17:49 GMT

ಅಬುಧಾಬಿ: ಬೆನ್ ಸ್ಟೋಕ್ಸ್ ಅರ್ಧಶತಕ ಹಾಗೂ ಇತರೆ ಬ್ಯಾಟ್ಸಮನ್ ಗಳ ಜವಾಬ್ದಾರಿಯುತ ಆಟದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 7 ವಿಕೆಟ್ ಗಳ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ಗೆಲುವಿಗೆ 186 ರನ್ ಗುರಿ ಪಡೆದ ರಾಜಸ್ಥಾನ 17.1 ಓವರ್ ಗಳಲ್ಲಿ ಗೆಲುವಿನ ದಡ ತಲುಪಿತು. ಆರಂಭಿಕ ಆಟಗಾರ ಬೆನ್ ಸ್ಟೋಕ್ಸ್ 50 (26 ಎಸೆತ) ರನ್ ಬಾರಿಸಿದರು.

ಸಂಜು ಸ್ಯಾಮ್ಸನ್ 48 (25 ಎಸೆತ), ರಾಬಿನ್ ಉತ್ತಪ್ಪ 30 (23 ಎಸೆತ), ನಾಯಕ ಸ್ಮಿತ್ 31 (20 ಎಸೆತ) ರನ್ ಗಳಿಸಿದರು. ಪಂಜಾಬ್ ಪರ ಅಶ್ವಿನ್ ಹಾಗೂ ಜೋರ್ಡನ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 185-4 ರನ್ ಗಳಿಸಿತ್ತು. 

ಆರಂಭಿಕ ಆಟಗಾರ ಕೆ.ಎಲ್ ರಾಹುಲ್ 46 (41 ಎಸೆತ) ಕ್ರಿಸ್ ಗೇಲ್ 99 (63 ಎಸೆತ) ನಿಕೋಲಸ್ ಪೂರನ್ 22 (10 ಎಸೆತ) ರನ್ ಬಾರಿಸಿದರು. ರಾಜಸ್ಥಾನ ಪರ ಜೋಫ್ರಾ ಅರ್ಚರ್ ಹಾಗೂ ಸ್ಟೋಕ್ಸ್ ತಲಾ 2 ವಿಕೆಟ್ ಪಡೆದರು.

ಮೊದಲ ಸುತ್ತಿನಲ್ಲಿ ಸರಣಿ ಸೋಲುಗಳಿಂದಾಗಿ ಅಂಕಪಟ್ಟಿಯ ಕೊನೆಯಲ್ಲಿದ್ದ ರಾಹುಲ್ ನಾಯಕತ್ವದ ಪಂಜಾಬ್ ತಂಡವು ಬಳಿಕ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಇಂದು ರಾಜಸ್ಥಾನಕ್ಕೆ ಶರಣಾಗುವ ಮೂಲಕ ತನ್ನ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ತಲಾ 13 ಪಂದ್ಯಗಳನ್ನಾಡಿರುವ ಪಂಜಾಬ್ ಮತ್ತು ರಾಜಸ್ಥಾನ ತಲಾ 6 ಗೆಲುವು ಹಾಗೂ 7 ಸೋಲುಗಳೊಂದಿಗೆ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದೆ. 13 ಪಂದ್ಯಗಳನ್ನಾಡಿರುವ ಕೊಲ್ಕತ್ತಾ 6 ಗೆಲುವು, 7 ಸೋಲಿನೊಂದಿಗೆ 6ನೇ ಸ್ಥಾನದಲ್ಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News