ಅಮೆರಿಕ ಅಧ್ಯಕ್ಷೀಯ ಚುನಾವಣೆ ರಾಜಕೀಯ ಗುಂಪುಗಳ ಪೋಸ್ಟ್‌ಗಳಿಗೆ ಫೇಸ್‌ಬುಕ್ ಕಡಿವಾಣ

Update: 2020-10-31 17:52 GMT

 ವಾಶಿಂಗ್ಟನ್,ಅ.31:ಮಂಗಳವಾರ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಗುಂಪುಗಳು ಅಥವಾ ಹೊಸ ಗುಂಪುಗಳ ಪೋಸ್ಟ್‌ಗಳನ್ನು ಫಾಲೋ ಮಾಡುವ ಬಗ್ಗೆ ಶಿಫಾರಸು ಮಾಡುವುದನ್ನು ತಾನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಅಂತಾರಾಷ್ಟ್ರೀಯ ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್‌ಬುಕ್ ಶುಕ್ರವಾರ ಘೋಷಿಸಿದೆ.

  ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಫೇಸ್‌ಬುಕ್ ಪ್ರಭಾವ ಬೀರುತ್ತಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಸೆನೆಟ್ ನಡೆಸಿದ ವಿಚಾರಣೆಯಲ್ಲಿ ಪಾಲ್ಗೊಂಡ ಸಂಸ್ಥೆಯ ವರಿಷ್ಠ ಮಾರ್ಕ್‌ಝಕರ್‌ಬರ್ಗ್ ಅವರು, ‘‘ ಎಲ್ಲಾ ರಾಜಕೀಯ ವಿಷಯಗಳು ಅಥವಾ ಸಾಮಾಜಿಕ ವಿಷಯಗಳ ಸಂಘಟನೆಗಳನ್ನು ಫಾಲೋ ಮಾಡುವಂತೆ ಶಿಫಾರಸು ಮಾಡುವುದನು ನಿಲ್ಲಿಸಲು ಕ್ರಮಗಳನ್ನು ಕೈಗೊಡಿದ್ದೇವೆ’’ ಎಂದರು.

ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಮಾಹಿತಿಗಳನ್ನು ಹರಡಲು ಅಥವಾ ತೀವ್ರವಾದಿ ಚಟುವಟಿಕೆಗಳನ್ನು ಸಂಘಟಿಸುವುದಕ್ಕಾಗಿ ಕೆಲವು ಫೇಸ್‌ಬುಕ್ ಗ್ರೂಪ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆಯೆಂದು ಹಲವಾರು ಕಣ್ಗಾವಲು ಸಂಸ್ಥೆಗಳು ಆಪಾದಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News