×
Ad

ಚೆಂಡೆಂದು ಭಾವಿಸಿ ರೆಫರಿಯ ಬೋಳು ತಲೆಯ ಹಿಂಬಾಲಿಸಿದ ಕೃತಕ ಬುದ್ದಿಮತ್ತೆಯ ಕ್ಯಾಮರಾ!

Update: 2020-11-02 14:52 IST

ಲಂಡನ್: ಸ್ಕಾಟ್ಲೆಂಡ್ ನಲ್ಲಿ ನಡೆದ ಫುಟ್ಬಾಲ್ ಪಂದ್ಯವೊಂದರಲ್ಲಿ ಕೃತಕ ಬುದ್ದಿಮತ್ತೆಯ ಕ್ಯಾಮರಾವು ರೆಫರಿಯ ಬೋಳು ತಲೆಯನ್ನು ಚೆಂಡೆಂದು ಭಾವಿಸಿ ಪದೇ ಪದೇ ತಪ್ಪು ಸಂದೇಶ ನೀಡಿ ಪಂದ್ಯ ವೀಕ್ಷಿಸುತ್ತಿದ್ದ ಫುಟ್ಬಾಲ್ ಅಭಿಮಾನಿಗಳನ್ನು ಗೊಂದಲಗೊಳಿಸಿರುವ ಘಟನೆ ನಡೆದಿದೆ.

ಶನಿವಾರ ಇನ್ ವರ್ನೆಸ್ ಕ್ಯಾಲೆಡೊನಿಯನ್ ಥಿಸೆಲ್ (ಐಸಿಟಿ) ಶನಿವಾರ ಐರ್ ಯುನೈಟೆಡ್ ತಂಡದ ವಿರುದ್ಧ ಆಡುವಾಗ ಕೃತಕ ಬುದ್ದಿಮತ್ತೆಯ ಕ್ಯಾಮರಾ ಈ ಎಡವಟ್ಟು ಮಾಡಿದೆ ಎಂದು ಡೈಲ್ ಮೇಲ್ ವರದಿ ಮಾಡಿದೆ.

ಉಭಯ ತಂಡಗಳು ಪಂದ್ಯದಲ್ಲಿ ಕ್ಯಾಮರಾಮನ್ ಅವರನ್ನು ನಿಯೋಜಿಸುವ ಬದಲಿಗೆ ಕೃತಕ ಬುದ್ದಿಮತ್ತೆಯ ಕ್ಯಾಮರಾವನ್ನು ಅವಲಂಬಿಸಿದ್ದವು. ಈ ಕ್ಯಾಮರಾವು ಪಂದ್ಯದುದ್ದಕ್ಕೂ ಚೆಂಡನ್ನು ಹಿಂಬಾಲಿಸಲು ಪ್ರೊಗ್ರಾಮ್ ಮಾಡಲಾಗಿತ್ತು.

ದುರದೃಷ್ಟವಶಾತ್ ಶನಿವಾರದ ಫುಟ್ಬಾಲ್ ಪಂದ್ಯದ ಸಮಯದಲ್ಲಿ ಕ್ಯಾಮರಾವು ರೆಫರಿಯ ಬೋಳು ತಲೆಯನ್ನು ತಪ್ಪಾಗಿ ಗ್ರಹಿಸಿದ ಕಾರಣ ಯೋಜನೆ ಎಲ್ಲವೂ ತಲೆ ಕೆಳಗಾಯಿತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News