ಪಿ.ವಿ. ಸಿಂಧು ಹಠಾತ್ ನಿವೃತ್ತಿ ಘೋಷಣೆ ?
ಹೊಸದಿಲ್ಲಿ : ನಾನು ನಿವೃತ್ತಿಯಾಗುತ್ತಿದ್ದೇನೆ. ಡೆನ್ಮಾರ್ಕ್ ಓಪನ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಾಧ್ಯವಾಗದಿರುವುದು ನಿರಾಸೆ ತಂದಿದೆ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಭಾರತದ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅಭಿಮಾನಿಗಳನ್ನು ಚಕಿತಗೊಳಿಸಿದ್ದಾರೆ. ಆದರೆ ನಿಜವಾಗಿ ಸಿಂಧು ಕ್ರೀಡೆಯಿಂದ ನಿವೃತ್ತರಾಗಿಲ್ಲ.
ಕೊರೋನದಿಂದ ಉಂಟಾಗಿರುವ ಅನಿಶ್ಚಿತತೆ ಬಗ್ಗೆ ಅವರು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ ಅಷ್ಟೆ.
ಪ್ರಸ್ತುತ ಅಶಾಂತಿ ಸ್ಥಿತಿ, ನಕರಾತ್ಮಕತೆ ಹಾಗೂ ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಯಂತ್ರಣದ ಕೊರತೆಯಿಂದಾಗಿ ನಾನು 'ನಿವೃತ್ತಿ'ಯಾಗುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.
ಮೂರು ಪುಟಗಳ ಟಿಪ್ಪಣಿಯಲ್ಲಿ ಕೊರೋನ ವೈರಸ್ ಕುರಿತು ಬರೆದಿರುವ ಸಿಂಧು ಪೋಸ್ಟ್ ನ ಕೊನೆಯಲ್ಲಿ ನನ್ನ ಈ ಸಂದೇಶ ಅಭಿಮಾನಿಗಳಿಗೆ ಸಣ್ಣ ಆಘಾತ ತಂದಿರಬಹುದು. ಆದರೆ, ಅಭೂತಪೂರ್ವ ಸಮಯಗಳಿಗೆ ಅಭೂತಪೂರ್ವ ಕ್ರಮಗಳು ಬೇಕಾಗುತ್ತವೆ. ನಾನು ತರಬೇತಿ ನಡೆಸುವುದನ್ನು ನಿಲ್ಲಿಸಲಾರೆ. ಏಶ್ಯ ಓಪನ್ ಗಾಗಿ ಕಠಿಣ ಶ್ರಮವಹಿಸುವೆ. ನಾನು ಕ್ರೀಡೆಯಿಂದ ನಿವೃತ್ತಿಯಾಗಲಾರೆ ಎಂದು ಸ್ಪಷ್ಟನೆ ನೀಡಿದರು.
ಸಿಂಧು ಪ್ರಸ್ತುತ ವಿಶ್ವದ ನಂ.7ನೇ ಆಟಗಾರ್ತಿಯಾಗಿದ್ದಾರೆ.