ಐಪಿಎಲ್: ಡೆಲ್ಲಿಗೆ 153 ರನ್ ಗುರಿ ನೀಡಿದ ಆರ್ ಸಿಬಿ

Update: 2020-11-02 15:57 GMT

ಅಬುಧಾಬಿ: ಆರಂಭಿಕ ಬ್ಯಾಟ್ಸ್ ಮನ್  ದೇವದತ್ತ ಪಡಿಕ್ಕಲ್ ಅರ್ಧಶತಕದ ಕೊಡುಗೆಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ)ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿಗೆ 153 ರನ್ ಗುರಿ ನೀಡಿದೆ.

ಐಪಿಎಲ್ ನ 55ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 152 ರನ್ ಗಳಿಸಿತು. ಆರ್ ಸಿಬಿ ಪರ ದೇವದತ್ತ ಪಡಿಕ್ಕಲ್ ಬರೋಬ್ಬರಿ 50 ರನ್ ಗಳಿಸಿ(41 ಎಸೆತ, 5 ಬೌಂಡರಿ)ಅಗ್ರ ಸ್ಕೋರರ್ ಎನಿಸಿಕೊಂಡರು. ಎಬಿಡಿವಿಲಿಯರ್ಸ್(35, 21 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು.

ಡೆಲ್ಲಿ ಪರವಾಗಿ ನೋಟ್ಜೆ (3-33) ಹಾಗೂ ಕಾಗಿಸೊ ರಬಾಡ(2-30) ತಮ್ಮೊಳಗೆ ಐದು ವಿಕೆಟ್ ಗಳನ್ನು ಹಂಚಿಕೊಂಡರು.

ಈ ವರ್ಷದ ಐಪಿಎಲ್ ನಲ್ಲಿ ಪ್ಲೇ ಆಫ್ ಹಂತಕ್ಕೇರಲು ಉಭಯ ತಂಡಗಳಿಗೆ ಈ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News