×
Ad

ಕ್ವಾಲಿಫೈಯರ್ 2: ಡೆಲ್ಲಿ ವಿರುದ್ಧ ಹೈದರಾಬಾದ್ ಗೆಲುವಿಗೆ 190 ರನ್ ಗುರಿ

Update: 2020-11-08 21:27 IST

ಅಬುಧಾಬಿ: ಐಪಿಎಲ್2020 ಆವೃತ್ತಿಯ ಕ್ವಾಲಿಫೈಯರ್2 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಸೆಣಸಾಡುತ್ತಿದ್ದು, ಮೊದಲು ಇನ್ನಿಂಗ್ಸ್ ಆಡಿದ ಡೆಲ್ಲಿ ತಂಡವು ಹೈದರಾಬಾದ್ ಗೆ 190 ರನ್ ಗಳ ಬೃಹತ್ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 189/3 ರನ್ ಗಳಿಸಿತು. 

ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಸ್ಟೋನಿಸ್ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ ಈ ಜೋಡಿ 86 ರನ್ ಗಳ ಜೊತೆಯಾಟ ನಡೆಸಿತು. ಸ್ಟೋನಿಸ್ 38 ರನ್ ಗಳಿಸಿದರೆ, ಶಿಖರ್ ಧವನ್ 78 (50 ಎಸೆತ) ರನ್ ಬಾರಿಸಿದರು.

ಶ್ರೇಯಸ್ ಅಯ್ಯರ್ 21, ಹೆಟ್ಮೈರ್ 41 ರನ್ ಗಳಿಸಿದರು. ಹೈದರಾಬಾದ್ ಪರ ಸಂದೀಪ್ ಶರ್ಮಾ, ಹೋಲ್ಡರ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈಗಾಗಲೇ ಐಪಿಎಲ್ ಫೈನಲ್ ಪ್ರವೇಶಿಸಿದ್ದು, ಫೈನಲ್ ತಲುಪುವ ಮತ್ತೊಂದು ತಂಡ ಯಾವುದು ಎಂಬ ಪ್ರಶ್ನೆಗೆ ಈ ಪಂದ್ಯದ ಮೂಲಕ ಉತ್ತರ ಸಿಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News