×
Ad

ಯಾವುದೇ ಒತ್ತಡದಲ್ಲಿಲ್ಲ: ಜೊಕೊವಿಕ್

Update: 2020-11-15 11:45 IST

ಲಂಡನ್: ಪುರುಷರ ಟೆನಿಸ್‌ನಲ್ಲಿ ನಂ.1 ಶ್ರೇಯಾಂಕವನ್ನು ದೃಢಪಡಿಸಿರುವುದರಿಂದ ಎಟಿಪಿ ಫೈನಲ್ಸ್‌ನಲ್ಲಿ ಆಡಲು ಹೋಗುವಾಗ ಕೆಲವು ಒತ್ತಡಗಳು ಕಡಿಮೆಯಾಗಿವೆ ಎಂದು ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಹೇಳಿದ್ದಾರೆ.

 33ರ ಹರೆಯದ ಜೊಕೊವಿಕ್ ಈ ವರ್ಷ ಆರನೇ ಕಿರೀಟವನ್ನು ಧರಿಸಲು ಮತ್ತು ರೋಜರ್ ಫೆಡರರ್ ದಾಖಲೆಯನ್ನು ಸರಿಗಟ್ಟಲು ಈ ಋತುವಿನ ಅಂತ್ಯದ ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಅರ್ಜೆಂಟೀನದ ಡಿಗೋ ಶಾರ್ಟ್ಸ್‌ಮನ್‌ರನ್ನು ಸೋಮವಾರ ತಮ್ಮ ಆರಂಭಿಕ ಆಟಗಾರನಾಗಿ ಎದುರಿಸಲಿದ್ದಾರೆ.

‘‘ನಾನು ಪ್ರತಿಯೊಂದು ಪಂದ್ಯದಲ್ಲೂ ಗೆಲ್ಲಲು ಬಯಸುತ್ತೇನೆ. ಟ್ರೊಫಿಯನ್ನು ಗೆಲ್ಲಲು ಪ್ರಯತ್ನಿಸುತ್ತೇನೆ. ನಾನು ಈ ಋತುವನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಕೊನೆಗೊಳಿಸಬಹುದೆಂದು ಭಾವಿಸುತ್ತೇನೆ. ಕಳೆದ 10 ವರ್ಷಗಳಲ್ಲಿ ಇಲ್ಲಿ ಪಡೆದ ಯಶಸ್ಸು ನನಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ’’ಎಂದು ನೊವಾಕ್ ಜೊಕೊವಿಕ್ ಹೇಳಿದ್ದಾರೆ.

ಎರಡನೇ ಶ್ರೇಯಾಂಕದ ನಡಾಲ್ ರವಿವಾರ ರಶ್ಯದ ಆಂಡ್ರೆ ರುಬ್ಲೆವ್‌ರನ್ನು ಎದುರಿಸಲಿದ್ದಾರೆ. ಹಾರ್ಡ್ ಕೋರ್ಟ್‌ನಲ್ಲಿ ತನ್ನ ಮೊದಲ ಎಟಿಪಿ ಫೈನಲ್ಸ್ ಪ್ರಶಸ್ತಿಯನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News