ಒಲಿಂಪಿಕ್ಸ್ ನಲ್ಲಿ ಟ್ವೆಂಟಿ-20 ಕ್ರಿಕೆಟ್ ಸೇರ್ಪಡೆಗೆ ದ್ರಾವಿಡ್ ಬೆಂಬಲ

Update: 2020-11-15 06:39 GMT

ಹೊಸದಿಲ್ಲಿ: ಕ್ರಿಕೆಟ್ ಒಲಿಂಪಿಕ್ ಕ್ರೀಡಾಕೂಟದ ಭಾಗವಾಗಬೇಕೆಂಬ ವಿಚಾರವನ್ನು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಬೆಂಬಲಿಸಿದ್ದಾರೆ.

 2018ರಲ್ಲಿ ಟ್ವೆಂಟಿ-20 ಕ್ರಿಕೆಟ್ ಸ್ವರೂಪವನ್ನು ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ಮಾತುಕತೆ ನಡೆದಿದ್ದು, ಐಸಿಸಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 87ರಷ್ಟು ಅಭಿಮಾನಿಗಳು ಕ್ರಿಕೆಟ್ ಒಲಿಂಪಿಕ್ಸ್‌ನಲ್ಲಿ ಭಾಗವಾಗಬೇಕೆಂದು ಬಯಸಿದ್ದಾರೆ ಎಂದು ಹೇಳಿದರು.

 ಆದಾಗ್ಯೂ, ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅತ್ಯಂತ ಶ್ರೀಮಂತ ಮತ್ತು ಬಲಿಷ್ಠ ಸದಸ್ಯರಾಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ತಂಡವನ್ನು ಒಲಿಂಪಿಕ್ಸ್‌ಗೆ ಕಳುಹಿಸುವಲ್ಲಿ ಉತ್ಸುಕವಾಗಿಲ್ಲ. 2010 ಮತ್ತು 2014ರ ಆವೃತ್ತಿಗಳಲ್ಲಿ ಕ್ರಿಕೆಟ್ ಏಶ್ಯನ್ ಕ್ರೀಡಾಕೂಟದ ಭಾಗವಾಗಿತ್ತು ಆದರೆ ಬಿಸಿಸಿಐ ತನ್ನ ಯಾವುದೇ ತಂಡಗಳನ್ನು ಕಳುಹಿಸಲಿಲ್ಲ.

164 ಟೆಸ್ಟ್ ಪಂದ್ಯಗಳನ್ನು ಆಡಿ 13,288 ರನ್ ಗಳಿಸಿರುವ ಭಾರತದ ಮಾಜಿ ಬ್ಯಾಟ್ಸ್ ಮನ್ ದ್ರಾವಿಡ್ ಅವರು ಭಾರತದ ಆಟಗಾರರ ಪೈಕಿ ಗರಿಷ್ಠ ರನ್ ಗಳಿಸಿರುವ ಮತ್ತು ಗರಿಷ್ಠ ಆಡಿರುವ ಆಟಗಾರ ಪೈಕಿ ಸಚಿನ್ ತೆಂಡುಲ್ಕರ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಒಲಿಂಪಿಕ್ಸ್ ನಲ್ಲಿ ಟ್ವೆಂಟಿ -20 ಕ್ರಿಕೆಟ್‌ನ್ನು ಸೇರಿಸುವುದರಿಂದ ಕ್ರಿಕೆಟ್‌ನ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರು 75 ದೇಶಗಳಲ್ಲಿ ಟ್ವೆಂಟಿ-20 ಕ್ರಿಕೆಟ್‌ಇರುವುದರಿಂದ ಇದನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸುವುದು ಉತ್ತಮ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News