×
Ad

ಫೇಸ್‌ಬುಕ್‌ನಲ್ಲಿ ಕ್ರಿಕೆಟಿಗ ಶಾಕೀಬ್‌ಗೆ ಜೀವ ಬೆದರಿಕೆ

Update: 2020-11-17 14:48 IST

ಢಾಕಾ: ಬಾಂಗ್ಲಾದೇಶದ ಆಲ್‌ರೌಂಡರ್ ಶಾಕೀಬ್ ಅಲ್ ಹಸನ್‌ಗೆ ಧರ್ಮ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಫೇಸ್‌ಬುಕ್ ಲೈವ್‌ನಲ್ಲಿ ವ್ಯಕ್ತಿಯೊಬ್ಬನಿಂದ ಜೀವಬೆದರಿಕೆ ಕರೆ ಬಂದಿದೆ. 

ರವಿವಾರ ಮಧ್ಯಾಹ್ನ 12:06ಕ್ಕೆ ಫೇಸ್‌ಬುಕ್ ಲೈವ್ ಆರಂಭಿಸಿದ್ದ ಸಿಲ್ವೆಟ್‌ನ ಶಹಪುರ್ ತಾಲೂಕಿನ ಪ್ಯಾರಾ ನಿವಾಸಿ ಮೊಹ್ಸಿನ್ ತಾಲೂಕ್ದಾರ್ ಎಂಬಾತ ಶಾಕೀಬ್ ವರ್ತನೆಯು ಮುಸ್ಲಿಮರನ್ನು ನೋಯಿಸಿದೆ ಎಂದು ಹೇಳಿಕೊಂಡಿದ್ದ. ಶಾಕೀಬ್‌ರನ್ನು ತುಂಡುತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ. ಅಗತ್ಯವಿದ್ದರೆ ಶಾಕೀಬ್‌ರನ್ನು ಕೊಲ್ಲಲು ಸಿಲ್ಹೆಟ್‌ನಿಂದ ಢಾಕಾಕ್ಕೆ ನಡೆದುಕೊಂಡು ಹೋಗುವುದಾಗಿ ಹೇಳಿದ್ದಾನೆ.

ಶಾಕೀಬ್ ಕೋಲ್ಕತ್ತಾದಲ್ಲಿ ಕಾಳಿಪೂಜೆಯನ್ನು ಉದ್ಘಾಟಿಸಿದ್ದಕ್ಕಾಗಿ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.

ವೀಡಿಯೊ ಲಿಂಕ್‌ನ್ನು ಸೈಬರ್ ಫೋರೆನ್ಸಿಕ್ ತಂಡಕ್ಕೆ ರವಾನಿಸಲಾಗಿದೆ. ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಹೆಚ್ಚುವರಿ ಉಪಾಯುಕ್ತ ಅಶ್ರಫ್‌ವುಲ್ಹಾ ತಾಹೆರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News