ಮೆಡ್ವೆಡೇವ್ ಗೆ ಮೊದಲ ಜಯ
ಲಂಡನ್, ನ.17: ಕಳೆದ ವರ್ಷ ಎಟಿಪಿ ಫೈನಲ್ಸ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಡ್ಯಾನಿಲ್ ಮೆಡ್ವೆಡೇವ್ ಸೋಮವಾರ 2018ರ ಚಾಂಪಿಯನ್ ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧ ಆರಂಭಿಕ ಜಯ ಸಾಧಿಸಿ ತನ್ನ ಛಾಪು ಮೂಡಿಸಿದ್ದಾರೆ.
24ರ ಹರೆಯದ ಮೆಡ್ವೆಡೇವ್ ಅವರು ಝ್ವೆರೆವ್ ವಿರುದ್ಧ 6-3, 6-4 ಅಂತರದ ಗೆಲುವು ದಾಖಲಿಸಿದ್ದಾರೆ.
ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ಅವರು ಚೊಚ್ಚಲ ಪಂದ್ಯವಾನ್ನಾಡಿದ ಡಿಯಾಗೋ ಶ್ವಾಟ್ಜ್ ಮನ್ ಅವರನ್ನು 6-3, 6-2 ಸೆಟ್‌ಗಳಿಂದ ಮಣಿಸಿದರು.
ಮೆಡ್ವೆಡೇವ್ ಬುಧವಾರ ಜೊಕೊವಿಕ್ ಅವರನ್ನು ಎದುರಿಸಲಿದ್ದಾರೆ. 2007ರಲ್ಲಿ ಚೊಚ್ಚಲ ಮೊದಲ ಬಾರಿ ಆಡಿದ್ದ ಜೊಕೊವಿಕ್ ಗ್ರೂಪ್ ಹಂತದ ಮೂರು ಪಂದ್ಯಗಳನ್ನು ಕಳೆದುಕೊಂಡಿದ್ದರು. ಆದರೆ ಒಂದು ವರ್ಷದ ನಂತರ ವಾಪಸಾಗಿ ನಿಕೋಲಾಯ್ ಡೇವಿಡೆಂಕೊ ಅವರನ್ನು ಸೋಲಿಸಿ ಶಾಂಘೈನಲ್ಲಿ ಪ್ರಶಸ್ತಿಯನ್ನು ಪಡೆದಿದ್ದರು. 2009ರಲ್ಲಿ ಈವೆಂಟ್ ಲಂಡನ್‌ಗೆ ಸ್ಥಳಾಂತರಗೊಂಡಾಗಿನಿಂದ ಜೊಕೊವಿಕ್ ಇನ್ನೂ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.