×
Ad

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ರೀಡಾಪಟುಗಳಿಗೆ ಕೊರೋನ ಲಸಿಕೆ ಕಡ್ಡಾಯವಲ್ಲ: ಐಒಸಿ ಮುಖ್ಯಸ್ಥ

Update: 2020-11-17 23:23 IST

ಟೋಕಿಯೊ, ನ.17: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಕ್ರೀಡಾಪಟುಗಳು ಕೊರೋನ ವೈರಸ್ ಲಸಿಕೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಐಒಸಿ ಮುಖ್ಯಸ್ಥ ಥಾಮಸ್ ಬ್ಯಾಚ್ ಮಂಗಳ ವಾರ ಹೇಳಿದ್ದಾರೆ.

  ಲಸಿಕೆ ತೆಗೆದುಕೊಳ್ಳುವುದು ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಭಿಮಾನಿಗಳಿಗೆ ಸ್ವಯಂ ನಿರ್ಧಾರವಾಗಿರುತ್ತದೆ ಎಂದು ಹೇಳಿದರು.

 ‘‘ಇದು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಪರಿಸ್ಥಿತಿಗಳ ಪ್ರಶ್ನೆಯಾಗಿದೆ. ಇದು ಲಭ್ಯತೆಯ ಪ್ರಶ್ನೆಯಾಗಿದೆ. ಆದಾಗ್ಯೂ, ಐಒಸಿ ಕ್ರೀಡಾಪಟುಗಳು ಮತ್ತು ಇತರರಿಗೆ ಲಸಿಕೆ ಹಾಕುವಂತೆ ಮನವಿ ಮಾಡುತ್ತದೆ’’ ಎಂದು ಬ್ಯಾಚ್ ತಿಳಿಸಿದರು.

  ಕೊರೋನ ವೈರಸ್ ಸೋಂಕು ಹರಡುತ್ತಿರುವ ಕಾರಣದಿಂದಾಗಿ ಟೋಕಿಯೊ ಒಲಿಂಪಿಕ್ಸ್ 2020ನ್ನು ಒಂದು ವರ್ಷ ಮುಂದೂಡಲಾಗಿದ್ದು, ಮುಂದಿನ ವರ್ಷದ ಜುಲೈನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News