ಕ್ರಿಕೆಟಿಗರ ಪ್ರತಿಷ್ಠಾನಕ್ಕೆ ಗವಾಸ್ಕರ್ ಶ್ಲಾಘನೆ

Update: 2020-11-17 17:56 GMT

ಮುಂಬೈ, ನ.17: ಮುಂಬೈ ಮೂಲದ ಕ್ರಿಕೆಟಿಗರ ಪ್ರತಿಷ್ಠಾನವು ಮುಂಬೈನ ಮಾಜಿ ಮಹಿಳಾ ಕ್ರಿಕೆಟಿಗರಿಗೆ ನೆರವು ನೀಡಿದ್ದು, ಈ ಕ್ರಮವನ್ನು ಬ್ಯಾಟಿಂಗ್ ದಂತಕಥೆ ಸುನೀಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.

127 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಸುರೇಖಾ ಭಂಡಾರೆ, 139 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡ ಸಂಧ್ಯಾ ರೆಲೆಕರ್ ಮತ್ತು 79 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತನ್ನ ಕೌಶಲ್ಯವನ್ನು ತೋರಿಸಿದ ಅಪರ್ಣಾ ಕಾಂಬ್ಲಿ ಅವರನ್ನು ಕ್ರಿಕೆಟಿಗರ ಪ್ರತಿಷ್ಠಾನವು ಗೌರವಿಸಲು ನಿರ್ಧರಿಸಿತ್ತು. ಮೂವರು ಆಟಗಾರ್ತಿಯರು ಕ್ರಿಕೆಟಿಗರ ಪ್ರತಿಷ್ಠಾನದಿಂದ 50,000 ರಿಂದ 75,000 ರೂ. ಗಳವರೆಗೆ ನೆರವು ಪಡೆದಿದ್ದಾರೆ.

 ‘‘ಈ ಮೂವರು ಕ್ರಿಕೆಟಿಗರು ಇಂದಿನ ಮಹಿಳಾ ಕ್ರಿಕೆಟಿಗರಿಗೆ ಉತ್ತಮ ದಾರಿ ತೋರಿಸಿದ್ದಾರೆ ಮತ್ತು ಫೌಂಡೇಶನ್ ಅವರ ಪ್ರಯತ್ನಗಳನ್ನು ಗುರುತಿಸಿರುವುದು ಅತ್ಯಂತ ಹೃದಯಸ್ಪರ್ಶಿಯಾಗಿದೆ ’’ ಎಂದು ಕ್ರಿಕೆಟಿಗರ ಪ್ರತಿಷ್ಠಾನ ಮಂಗಳವಾರ ಬಿಡುಗಡೆ ಮಾಡಿದ ಪ್ರಕಟನೆಯಲ್ಲಿ ಗವಾಸ್ಕರ್ ಹೇಳಿದ್ದಾರೆ.

ಮುಂಬೈ ಕ್ರಿಕೆಟ್‌ನ 40ಕ್ಕೂ ಹೆಚ್ಚು ಕ್ರಿಕೆಟಿಗರಿಗೆ ಪ್ರತಿಷ್ಠಾನವು ಸಹಾಯ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News