ಭಾರತದಲ್ಲಿ ನಡೆಯಬೇಕಾಗಿದ್ದ ಫಿಫಾ ಅಂಡರ್-17 ವಿಶ್ವಕಪ್ ರದ್ದು

Update: 2020-11-17 18:08 GMT

ಹೊಸದಿಲ್ಲಿ: ಭಾರತದಲ್ಲಿ ಈ ವರ್ಷ ನಡೆಯಬೇಕಾಗಿದ್ದ ಮಹಿಳೆಯರ ಅಂಡರ್-17 ವಿಶ್ವಕಪ್ ಟೂರ್ನಿಯು ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣಕ್ಕೆ 2021ಕ್ಕೆ ಮುಂದೂಡಲ್ಪಟ್ಟಿತ್ತು. ಇದೀಗ ವಿಶ್ವ ಫುಟ್ಬಾಲ್ ಆಡಳಿತ ಮಂಡಳಿಯು . 2021ರಲ್ಲಿ ನಡೆಯಬೇಕಾಗಿದ್ದ ಟೂರ್ನಿಯನ್ನು ರದ್ದುಪಡಿಸಿದ್ದು, 2022ರ ಆವೃತ್ತಿಯ ಟೂರ್ನಿಯ ಆತಿಥ್ಯದ ಹಕ್ಕನ್ನು ಹಸ್ತಾಂತರಿಸಲು ನಿರ್ಧರಿಸಿದೆ.

ಜಾಗತಿಕ ಮಟ್ಟದಲ್ಲಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ಈಗಿನ ಪರಿಸ್ಥಿತಿ ಹಾಗೂ ಫುಟ್ಬಾಲ್ ಮೇಲೆ ಅದರ ಪರಿಣಾಮದ ಕುರಿತು ಮಾಹಿತಿ ಕಲೆ ಹಾಕಲು ಒಂದೆಡೆ ಸೇರಿದ್ದ ಫಿಫಾ ಕೌನ್ಸಿಲ್ ಬ್ಯುರೋ ಈ ನಿರ್ಧಾರ ಕೈಗೊಂಡಿದೆ.

ಫಿಫಾ ಕ್ರಮವಾಗಿ ಭಾರತ ಹಾಗೂ ಕೋಸ್ಟರಿಕಾದಲ್ಲಿ ನಿಗದಿಯಾಗಿರುವ ಮಹಿಳೆಯರ ಅಂಡರ್-17 ವಿಶ್ವಕಪ್ ಹಾಗೂ ಅಂಡರ್-20 ವಿಶ್ವಕಪ್ ರದ್ದುಪಡಿಸಿದೆ. ಈ ಎರಡು ದೇಶಗಳಿಗೆ 2022ರ ಆವೃತ್ತಿಯ ವಿಶ್ವಕಪ್ ಆತಿಥ್ಯದ ಹಕ್ಕನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News