ಭಾರತ- ಆಸ್ಟ್ರೇಲಿಯ ಏಕದಿನ, ಟ್ವೆಂಟಿ-20 ಪಂದ್ಯಗಳ ಟಿಕೆಟ್‌ಗಳೆಲ್ಲವೂ ಮಾರಾಟ

Update: 2020-11-20 18:23 GMT

ಹೊಸದಿಲ್ಲಿ: ಭಾರತ ಹಾಗೂ ಆಸ್ಟ್ರೇಲಿಯದ ನಡುವೆ ನಡೆಯಲಿರುವ ಬಹು ನಿರೀಕ್ಷಿತ ಏಕದಿನ ಹಾಗೂ ಟ್ವೆಂಟಿ-20 ಸರಣಿಗಳ ಆರು ಪಂದ್ಯಗಳ ಪೈಕಿ ಐದು ಪಂದ್ಯಗಳ ಟಿಕೆಟ್‌ಗಳೆಲ್ಲವೂ ಶುಕ್ರವಾರ ಸೋಲ್ಡ್ ಔಟ್ ಆಗಿವೆ.

ಸಿಡ್ನಿ ಕ್ರಿಕೆಟ್ ಮೈದಾನ (ಎಸ್‌ಸಿಜಿ) ಹಾಗೂ ಮನುಕಾ ಓವಲ್‌ನಲ್ಲಿ ನಡೆಯಲಿರುವ ಎರಡನೇ ಹಾಗೂ ಮೂರನೇ ಏಕದಿನ ಪಂದ್ಯದ ಟಿಕೆಟ್‌ಗಳೆಲ್ಲವೂ ಮಾರಾಟವಾಗಿವೆೆ. ನವೆಂಬರ್ 27 ರಂದು ಎಸ್‌ಸಿಜಿಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದ ಕೆಲವೇ ಟಿಕೆಟ್‌ಗಳು ಬಾಕಿ ಇವೆ.

 ಮನುಕಾ ಓವಲ್ ಹಾಗೂ ಎಸ್‌ಸಿಜಿಯಲ್ಲಿ ನಡೆಯಲಿರುವ ಟ್ವೆಂಟಿ-20 ಸರಣಿಯ ಮೂರೂ ಪಂದ್ಯಗಳ ಟಿಕೆಟ್‌ಗಳೆಲ್ಲವೂ ಮಾರಾಟವಾಗಿವೆ. ಈ ಸರಣಿಯಲ್ಲಿ ಶೇ.50ರಷ್ಟು ಪ್ರೇಕ್ಷಕರ ಸಾಮರ್ಥ್ಯದೊಂದಿಗೆ ಆಡಲು ಅನುಮತಿ ನೀಡಲಾಗಿದೆ.

ಟಿಕೆಟ್‌ಗಳ ಮಾರಾಟವು ಪುರುಷರ ಕ್ರಿಕೆಟ್ ಅಂತರ್‌ರಾಷ್ಟ್ರೀಯ ಋತು ಆರಂಭವಾಗುವುದನ್ನು ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಪ್ರೇಕ್ಷಕರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಕಾರ್ಯಕಾರಿ ಪ್ರಧಾನ ಪ್ರಬಂಧಕ ಅಂಥೋನಿ ಎವೆರಾರ್ಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News