ಅಂತಿಮ ನಾಲ್ಕರ ಸುತ್ತು ತಲುಪಿದ ನಡಾಲ್

Update: 2020-11-20 18:29 GMT

ಲಂಡನ್: ಹಾಲಿ ಚಾಂಪಿಯನ್ ಸ್ಟೆಫನೊಸ್ ಸಿಟ್ಸಿಪಾಸ್‌ರನ್ನು ಮಣಿಸಿರುವ ರಫೆಲ್ ನಡಾಲ್ ಅಂತಿಮ ನಾಲ್ಕರ ಸುತ್ತನ್ನು ಪ್ರವೇಶಿಸುವು ದರೊಂದಿಗೆ ಚೊಚ್ಚಲ ಎಟಿಪಿ ಫೈನಲ್ಸ್ ಪ್ರಶಸ್ತಿ ಜಯಿಸುವ ವಿಶ್ವಾಸವನ್ನು ಜೀವಂತವಾಗಿರಿಸಿಕೊಂಡಿದ್ದಾರೆ.

 ಸ್ಪೇನ್‌ನ ನಡಾಲ್ ಗುರುವಾರ ಲಂಡನ್‌ನಲ್ಲಿ ನಡೆದಿರುವ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸಿಟ್ಸಿಪಾಸ್‌ರನ್ನು 6-4, 4-6, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.

86 ಸಿಂಗಲ್ಸ್ ಪ್ರಶಸ್ತಿಗಳನ್ನು ಜಯಿಸಿರುವ ನಡಾಲ್ 8 ಪ್ರಮುಖ ಆಟಗಾರರು ಸ್ಪರ್ಧಿಸುತ್ತಿರುವ ಎಟಿಪಿ ಫೈನಲ್ಸ್ ನಲ್ಲಿ ಜಯಶಾಲಿಯಾಗಿ ತನಗೆ ಈವರೆಗೆ ಗೆಲ್ಲಲು ಸಾಧ್ಯವಾಗದ ಪ್ರಮುಖ ಪ್ರಶಸ್ತಿಯನ್ನು ಮುಡಿಗೇರಿಸುವ ನಿಟ್ಟಿಯಲ್ಲಿ ಹೋರಾಟ ಮುಂದುವರಿಸಿದ್ದಾರೆ.

34ರ ಹರೆಯದ ನಡಾಲ್ ದಾಖಲೆ ಸತತ 16 ಬಾರಿ ಎಟಿಪಿ ಫೈನಲ್ಸ್‌ಗೆ ತೇರ್ಗಡೆಯಾಗಿದ್ದರು.ಅದರೆ ಅವರು ಆರು ಬಾರಿ ಈ ಟೂರ್ನಿಯಿಂದ ಹಿಂದೆ ಸರಿದಿದ್ದರು.

ನಡಾಲ್ ಅವರು ಈಗಾಗಲೇ ಟೋಕಿಯೊ ಗುಂಪಿನಿಂದ ಅಂತಿಮ-4ರ ಸುತ್ತು ಪ್ರವೇಶಿಸಿರುವ ರಶ್ಯದ ನಾಲ್ಕನೇ ಶ್ರೇಯಾಂಕದ ಡ್ಯಾನಿಲ್ ಮೆಡ್ವೆಡೆವ್‌ರನ್ನು ಎದುರಿಸ ಲಿದ್ದಾರೆ.

ಇದಕ್ಕೂ ಮೊದಲು ನಡೆದ ಮತ್ತೊಂದು ಪಂದ್ಯದಲ್ಲಿ ಈಗಾಗಲೇ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿರುವ ಡೊಮಿನಿಕ್ ಥೀಮ್ ಮೊದಲ ಬಾರಿ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ರಶ್ಯದ ರುಬ್ಲೆವಿನ್ ಎದುರು 2-6, 5-7 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News