ರಶ್ಯ: 24 ತಾಸುಗಳಲ್ಲಿ 24,822 ಹೊಸ ಕೊರೋನ ಪ್ರಕರಣ

Update: 2020-11-21 16:11 GMT

 ಮಾಸ್ಕೊ, ನ.21: ಕಳೆದ 24 ತಾಸುಗಳಲ್ಲಿ ರಶ್ಯದಲ್ಲಿ 24,822 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಹಿಂದಿನ ದಿನಕ್ಕಿಂತ 24,318ರಷ್ಟು ಅಧಿಕವಾಗಿದೆ. ರಶ್ಯದಲ್ಲಿ ಸತತವಾಗಿ ಮೂರು ದಿನಗಳಿಂದ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 20,64,748ಕ್ಕೇರಿದೆಯೆಂದು ಕೇಂದ್ರೀಯ ರೋಗ ಪ್ರತಿಕ್ರಿಯಾ ಕೇಂದ್ರವು ಶನಿವಾರ ತಿಳಿಸಿದೆ.

 ‘‘ಕಳೆದ 24 ತಾಸುಗಳಲ್ಲಿ ರಶ್ಯದ ಒಟ್ಟು 85 ಪ್ರಾಂತಗಳಲ್ಲಿ 34,822 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು ಆ ಪೈಕಿ 5,816 (23.4 ಶೇ.) ಪ್ರಕರಣಗಳು ಸಕ್ರಿಯವಾಗಿ ಪತ್ತೆಯಾಗಿವೆ’’ ಎಂದು ಕೇಂದ್ರವು ಹೇಳಿದೆ.

ರಾಜಧಾನಿ ಮಾಸ್ಕೊದಲ್ಲಿ ಒಂದೇ ದಿನದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯು 7,168ಕ್ಕೆ ಏರಿಕೆಯಾಗಿದ್ದು, ಇದು ದೇಶದಲ್ಲೇ ಗರಿಷ್ಠವಾಗಿದೆ. ಇನ್ನೊಂದು ಪ್ರಮುಖ ನಗರವಾದ ಸೈಂಟ್ ಪೀಟರ್ಸ್‌ಬರ್ಗ್ ನಗರದಲ್ಲಿ 2,476 ಕೊರೋನ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಕಳೆದ 24 ತಾಸುಗಳಲ್ಲಿ 467 ಮಂದಿ ಕೊರೋನಗೆ ಬಲಿಯಾಗಿದ್ದು, ಇದರೊಂದಿಗೆ ಆ ದೇಶದಲ್ಲಿ ಸೋಂಕಿನಿಂದ ಒಟ್ಟು ಸಾವಿನ ಸಂಖ್ಯೆ 35,778ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News