ಅಮೆರಿಕದಲ್ಲಿ ಮುಂದುವರಿದ ಕೊರೋನ ಆರ್ಭಟ: ಒಂದೇ ದಿನದಲ್ಲಿ 1.94 ಲಕ್ಷ ಮಂದಿಗೆ ಸೋಂಕು

Update: 2020-11-21 16:17 GMT

 ವಾಶಿಂಗ್ಟನ್,ನ.21: ಅಮೆರಿಕದಲ್ಲಿ ಕೊರೋನ ಆರ್ಭಟ ಮುಂದುವರಿದಿದ್ದು ಶುಕ್ರವಾರ 1.94 ಲಕ್ಷಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಹಾಗೂ 82 ಸಾವಿರಕ್ಕೂ ಅಧಿಕ ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

 ಕಳೆದ ಒಂದು ವಾರದಲ್ಲಿ ಅಮೆರಿಕಾದ್ಯಂತ ಪ್ರತಿ ದಿನ ಸರಾಸರಿ 1,66,272 ಪ್ರಕರಣಗಳು ವರದಿಯಾಗಿವೆ. ಎರಡು ವಾರಗಳ ಮೊದಲು ಇದ್ದ ಸೋಂಕಿತರ ಸರಾಸರಿ ಸಂಖ್ಯೆಗಿಂತ ಶೇ.73ರಷ್ಟು ಹೆಚ್ಚಳವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

 ಕೊರೋನ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದಲ್ಲ್ಲಿ ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ. ಶನಿವಾರದಿಂದ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದ್ದು, ಜನರು ಅಗತ್ಯ ಕಾರಣಗಳನ್ನು ಹೊರತುಪಡಿಸಿ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಮನೆಯಿಂದ ಹೊರಗೆ ಬರುವುದನ್ನು ನಿಷೇಧಿಸಿ ಕ್ಯಾಲಿಫೋರ್ನಿಯಾ ಗವರ್ನರ್ ಮೈಕ್ ಡೆವೈನ್ ಆದೇಶ ಹೊರಡಿಸಿದ್ದಾರೆ.

  ಓಹಿಯೋ ರಾಜ್ಯದಲ್ಲಿ ಗುರುವಾರದಿಂದಲೇ ಕರ್ಫ್ಯೂ ಜಾರಿಗೆ ಬಂದಿದೆ. ಆದಾಗ್ಯೂ, ಅತ್ಯಂತ ವೇಗವಾಗಿ ಕೊರೋನ ಸೋಂಕು ಹರಡುತ್ತಿರುವ ರಾಜ್ಯಗಳಾದ ದಕ್ಷಿಣ ಡಕೋಟಾ, ಉತ್ತರ ಡಕೋಟಾ, ವ್ಯೊಮಿಂಗ್, ಲೋವಾ ಹಾಗೂ ನೆಬ್ರಾಸ್ಕಗಳಲ್ಲಿಯೂ ಕರ್ಫ್ಯೂ ಜಾರಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News