ಐಎಸ್ಎಲ್: ಬೆಂಗಳೂರು-ಗೋವಾ ಪಂದ್ಯ ರೋಚಕ ಡ್ರಾ
Update: 2020-11-22 22:31 IST
ಪಟೋರ್ಡಾ: ಗೋವಾ ಎಫ್ ಸಿ ಹಾಗೂ ಬೆಂಗಳೂರು ಎಫ್ ಸಿ ನಡುವೆ ಇಲ್ಲಿನ ಫಟೋರ್ಡ ಸ್ಟೇಡಿಯಂನಲ್ಲಿ ರವಿವಾರ ನಡೆದ ಇಂಡಿಯನ್ ಸೂಪರ್ ಲೀಗ್ ನ (ಐಎಸ್ ಎಲ್) ಮೂರನೇ ಪಂದ್ಯವು 2-2ರಿಂದ ರೋಚಕ ಡ್ರಾನಲ್ಲಿ ಅಂತ್ಯಗೊಂಡಿದೆ.
ಕ್ಲೆಂಟನ್ ಸಿಲ್ವಾ ತನ್ನ ಚೊಚ್ಚಲ ಪಂದ್ಯದಲ್ಲಿ 27ನೇ ನಿಮಿಷದಲ್ಲಿ ಗೋಲು ದಾಖಲಿಸಿ ಬೆಂಗಳೂರು ಎಫ್ ಸಿಗೆ 1-0 ಮುನ್ನಡೆ ಒದಗಿಸಿಕೊಟ್ಟರು.ಮೊದಲಾರ್ಧದ ಅಂತ್ಯದಲ್ಲಿ ಬೆಂಗಳೂರು 1-0 ಮುನ್ನಡೆ ಕಾಯ್ದುಕೊಂಡಿತು.
ವಿರಾಮದ ಬಳಿಕ 57ನೇ ನಿಮಿಷದಲ್ಲಿ ಗೋಲು ಗಳಿಸಿದ ಜುನಾನ್ ಬೆಂಗಳೂರಿನ ಮುನ್ನಡೆಯನ್ನು 2-0ಗೆ ಏರಿಸಿದರು. ಗೋವಾ ತಂಡ ಮೂರೇ ನಿಮಿಷಗಳ ಅಂತರದಲ್ಲಿ ಪಂದ್ಯದ ಚಿತ್ರಣ ಬದಲಿಸಿತು. ಮೊದಲ ಪಂದ್ಯವನ್ನಾಡಿದ ಇಗೊರ್ ಅಂಗುಲೊ 66ನೇ ಹಾಗೂ 69ನೇ ನಿಮಿಷದಲ್ಲಿ ಅವಳಿ ಗೋಲು ಗಳಿಸಿ ಗೋವಾ ತಿರುಗೇಟು ನೀಡಲು ನೆರವಾದರು. ಗೋವಾ ಪಂದ್ಯವನ್ನು ಡ್ರಾಗೊಳಿಸುವ ಮೂಲಕ ಬೆಂಗಳೂರು ಕೈಯಿಂದ ಅಂಕವನ್ನು ಕಸಿದುಕೊಂಡಿದೆ.