ಮೆಡ್ವೆಡೆವ್ ಚಾಂಪಿಯನ್

Update: 2020-11-23 17:39 GMT

ಲಂಡನ್, ನ.23: ರಶ್ಯದ ಡೇನಿಲ್ ಮೆಡ್ವೆಡೆವ್ ಅವರು ತಮ್ಮ ವೃತ್ತಿಜೀವನದ ಅತಿದೊಡ್ಡ ಎಟಿಪಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಎಟಿಪಿ ಫೈನಲ್ಸ್‌ನ ಪ್ರಶಸ್ತಿಯ ಸುತ್ತಿನಲ್ಲಿ ಯುಎಸ್ ಓಪನ್ ಚಾಂಪಿಯನ್ ಡೊಮಿನಿಕ್ ಥೀಮ್ ಅವರನ್ನು 4-6,7-6 (2), 6-4 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಬಾಚಿಕೊಂಡರು.

 ಥೀಮ್ ಯುಎಸ್ ಓಪನ್ ಜಯಿಸಿದ ಮೊದಲ ಆಸ್ಟ್ರಿಯನ್‌ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ 24 ರ ಹರೆಯದ ಮೆಡ್ವೆಡೆವ್ ಅಪೂರ್ವ ಶೈಲಿಯಲ್ಲಿ ಥೀಮ್‌ಗೆ ಗೆಲುವು ನಿರಾಕರಿಸಿದರು.

 ಮುಂದಿನ ವರ್ಷ ಟುರಿನ್‌ಗೆ ಈ ಪಂದ್ಯಾವಳಿ ಸ್ಥಳಾಂತರಗೊಳ್ಳಲಿದ್ದು, ಅದಕ್ಕೂ ಮೊದಲು ಲಂಡನ್‌ನಲ್ಲಿ ನಡೆದ ಕೊನೆಯ ಪಂದ್ಯಾವಳಿಯಲ್ಲಿ ಪ್ರಶಸ್ತಿ ಜಯಿಸಿ ಮೆಡ್ವೆಡೆವ್ ಸ್ಮರಣೀಯವಾಗಿಸಿಕೊಂಡರು.

2009ರಲ್ಲಿ ಲಂಡನ್‌ನಲ್ಲಿ ಮೊದಲ ಆವೃತ್ತಿಯನ್ನು ನಿಕೋಲಾಯ್ ಡೇವಿಡೆಂಕೊ ಜಯಿಸಿದ್ದರು. ನಂತರ ಮೆಡ್ವೆಡೆವ್ ಪ್ರಶಸ್ತಿಯನ್ನು ಗೆದ್ದ ಮೊದಲ ರಶ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮೆಡ್ವೆಡೆವ್ ಈ ಪಂದ್ಯಾವಳಿಯಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಮೂವರು ಆಟಗಾರರನ್ನು ಮಣಿಸಿದ್ದರು. ಎಟಿಪಿ ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಗ್ರೂಪ್ ಹಂತದಲ್ಲಿ ವಿಶ್ವದ ನಂ.1 ಜೊಕೊವಿಕ್‌ರನ್ನು ಮಣಿಸಿದ್ದರು. ಸೆಮಿಫೈನಲ್‌ನಲ್ಲಿ 2ನೇ ಶ್ರೇಯಾಂಕದ ರಫೆಲ್ ನಡಾಲ್ ಅವರನ್ನು ಹಿಂದಿಕ್ಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News