ಆಫ್ರಿಕಾದ ಫುಟ್ಬಾಲ್ ಮುಖ್ಯಸ್ಥ ಅಹ್ಮದ್‌ಗೆ ನಿಷೇಧ ವಿಧಿಸಿದ ಫಿಫಾ

Update: 2020-11-23 17:40 GMT

ಜೋಹಾನ್ಸ್‌ಬರ್ಗ್, ನ. 23: ಫಿಫಾದ ನೈತಿಕ ಸಮಿತಿಯ ಶಿಫಾರಸ್ಸಿನಂತೆ ದಕ್ಷಿಣ ಆಫ್ರಿಕಾದ ಫುಟ್ಬಾಲ್ ಮುಖ್ಯಸ್ಥ ಅಹ್ಮದ್ ಅಹ್ಮದ್ ಅವರನ್ನು ಫಿಫಾ ಆಡಳಿತ ಮಂಡಳಿಯು ಐದು ವರ್ಷಗಳ ಕಾಲ ಫುಟ್ಬಾಲ್‌ಗೆ ನಿಷೇಧ ವಿಧಿಸಿದೆ.

  ಕಾನ್ಫೆಡರೇಶನ್ ಆಫ್ ಆಫ್ರಿಕನ್ ಫುಟ್ಬಾಲ್ (ಸಿಎಎಫ್) ಅಧ್ಯಕ್ಷರಾಗಿರುವ ಅಹ್ಮದ್ ಅವರು ಮಾರ್ಚ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿದ್ದರು. ಇದರಲ್ಲಿ ಅವರು ಹಲವು ಸವಾಲುಗಳನ್ನು ಎದುರಿಸಬೇಕಾಗಿತ್ತು.

  ಉಡುಗೊರೆಗಳು, ಇತರ ಪ್ರಯೋಜನ ಗಳನ್ನು ಪಡೆದ ಮತ್ತು ಹಣವನ್ನು ದುರುಪಯೋಗಪಡಿಸಿದ ಆರೋಪದ ಬಗ್ಗೆ ಸ್ವತಂತ್ರ ನೈತಿಕ ಸಮಿತಿಯು ನಡೆಸಿದ ತನಿಖೆಯಲ್ಲಿ ಅಹ್ಮದ್ ತಪ್ಪಿತಸ್ಥರೆಂದು ಸಾಬೀತಾಗಿದೆ ಎಂದು ಫಿಫಾ ತಿಳಿಸಿದೆ.

  ಐದು ವರ್ಷಗಳ ಕಾಲ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಫುಟ್ಬಾಲ್-ಸಂಬಂಧಿತ ಚಟುವಟಿಕೆಗಳಿಂದ (ಆಡಳಿತಾತ್ಮಕ, ಕ್ರೀಡೆ ಅಥವಾ ಇನ್ನಾವುದೇ) ಅಹ್ಮದ್‌ರನ್ನು ನಿಷೇಧಿಸಲಾಗಿದೆ ಎಂದು ಫಿಫಾಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News