ಪ್ರಶಸ್ತಿ ವಂಚಿತ ಪ್ರಜ್ಞೇಶ್

Update: 2020-11-23 17:54 GMT

ಒರ್ಲ್ಯಾಂಡೊ , ನ.23: ಒರ್ಲ್ಯಾಂಡೊ ಚಾಲೆಂಜರ್‌ಫೈನಲ್‌ನಲ್ಲಿ ಭಾರತದ ಟೆನಿಸ್ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ 3-6, 4-6 ಅಂತರದಲ್ಲಿ ಅಮೆರಿಕದ ಬ್ರಾಂಡನ್ ನಕಾಶಿಮಾ ವಿರುದ್ಧ ಸೋಲು ಅನುಭವಿಸುವುದರೊಂದಿಗೆ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.

ಕಳೆದ ವಾರ ಕ್ಯಾರಿ ಚಾಲೆಂಜರ್‌ನಲ್ಲಿ ಫೈನಲ್ ತಲುಪಿದ್ದ ಪ್ರಜ್ಞೇಶ್ ಇದೀಗ ಇನ್ನೊಂದು ಟೂರ್ನಿಯನ್ನು ಎರಡನೇ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿದ್ದಾರೆ.

ಪ್ರಜ್ನೇಶ್ ಈ ಸಾಧನೆಯೊಂದಿಗೆ ಎಟಿಪಿ ಶ್ರೇಯಾಂಕದಲ್ಲಿ 128 ನೇ ಸ್ಥಾನಕ್ಕೆ ಏರಿದ್ದಾರೆ. ಭಾರತದ ಪರ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ.

19ರ ಹರೆಯದ ನಕಾಶಿಮಾ ತನ್ನ ಮೊದಲ ಸಿಂಗಲ್ಸ್ ಚಾಲೆಂಜರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News