×
Ad

ಪ್ರೊ ಕಬಡ್ಡಿ ಲೀಗ್ ಮುಂದಿನ ವರ್ಷಕ್ಕೆ

Update: 2020-11-29 00:10 IST

 ಹೊಸದಿಲ್ಲಿ, ನ.28: ಕೋವಿಡ್ -19 ಕಾರಣದಿಂದಾಗಿ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ನ ಎಂಟನೇ ಆವೃತ್ತಿಯ ಟೂರ್ನಿಯನ್ನು ಮುಂದೂಡಲಾಗಿದೆ.

 ಆಟಗಾರರ ಅಧಿಕೃತ ಮಾರ್ಗಸೂಚಿಗಳು ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಘಟಕರು ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಿಕೆಎಲ್‌ನ 8ನೇ ಆವೃತ್ತಿಯನ್ನು ಮುಂದೂಡಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ. ಪುನರಾರಂಭಿಸಲು ಮುಂದಿನ ವರ್ಷ ಸೂಕ್ತ ಸಮಯನೋಡುತ್ತೇವೆ ಎಂದು ಸಂಘಟಕರು ತಿಳಿಸಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಲೀಗ್‌ನ ಐದು ವರ್ಷಗಳ ಒಪ್ಪಂದವು ಕಳೆದ ವರ್ಷ ಮುಕ್ತಾಯಗೊಂಡಿದ್ದರಿಂದ ಲೀಗ್ ಹೊಸ ಪ್ರಸಾರ ಪಾಲುದಾರನನ್ನು ಪಡೆಯುವ ಸಾಧ್ಯತೆ ಇದೆ ಎಂದು ಈ ಹಿಂದೆ ‘ಸ್ಪೋರ್ಟ್‌ಸ್ಟಾರ್’ ವರದಿ ಮಾಡಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಪಿಕೆಎಲ್‌ನ ಮುಂದಿನ ಆವೃತ್ತಿಯ ಮಾಧ್ಯಮ ಹಕ್ಕುಗಳನ್ನು ಹರಾಜು ಮಾಡುವ ಲೀಗ್‌ನ ಯೋಜನೆಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News