ಅದ್ಭುತ ಕ್ಯಾಚ್ ಪಡೆದು ಕೊಹ್ಲಿಗೆ ಪೆವಿಲಿಯನ್ ಹಾದಿ ತೋರಿಸಿದ ಹೆನ್ರಿಕ್ಸ್

Update: 2020-11-29 15:44 GMT
Photo: Twitter

ಸಿಡ್ನಿ:  ಭಾರತ ವಿರುದ್ದ ರವಿವಾರ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಭಾರತದ ನಾಯಕ ವಿರಾಟ್ ಕೊಹ್ಲಿ ನೀಡಿದ್ದ ಕ್ಯಾಚನ್ನು ಅದ್ಭುತ ಫೀಲ್ಡಿಂಗ್ ಮೂಲಕ ಪಡೆದ ಆಸ್ಟ್ರೇಲಿಯದ ಆಲ್ ರೌಂಡರ್ ಮೊಸಿಸ್ ಹೆನ್ರಿಕ್ಸ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ಗೆ ತನ್ನ ಪುನರಾಗಮನವನ್ನು ಸಾರಿದರು.

ಹೆನ್ರಿಕ್ಸ್ 2017ರ ಅಕ್ಟೋಬರ್ 10ರಂದು ಗುವಾಹಟಿಯಲ್ಲಿ ಭಾರತ ವಿರುದ್ಧವೇ ಆಸೀಸ್ ಪರ ಕೊನೆಯ ಬಾರಿ ಪಂದ್ಯ ಆಡಿದ್ದರು.

34ನೇ ಓವರ್ ನ 5ನೇ ಎಸೆತದಲ್ಲಿ ಕೊಹ್ಲಿ ಅವರು ಜೋಶ್ ಹೇಝಲ್ ವುಡ್ ಎಸೆತವನ್ನು ಮಿಡ್ ವಿಕೆಟ್ ನತ್ತ ತಳ್ಳಿದರು. ಚೆಂಡನ್ನು ಹಿಡಿಯಲು ಅಮೋಘ ಪ್ರಯತ್ನ ಮಾಡಿದ ಹೆನ್ರಿಕ್ಸ್ ತನ್ನ ಎಡ ಭಾಗಕ್ಕೆ ಧುಮುಕಿ ನೆಲಕ್ಕೆ ಬಹುತೇಕ ಅಡ್ಡಲಾಗಿ ಕ್ಯಾಚನ್ನು ಪಡೆದರು. 87 ಎಸೆತಗಳಲ್ಲಿ 89 ರನ್ ಗಳಿಸಿದ್ದ ಕೊಹ್ಲಿ ವಿಕೆಟ್ ಆತಿಥೇಯರಿಗೆ ಅತ್ಯಂತ ಮುಖ್ಯವಾಗಿತ್ತು.

ಮೊದಲ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ಮಾರ್ಕಸ್ ಸ್ಟೋನಿಸ್ ಬದಲಿಗೆ ಹೆನ್ರಿಕ್ಸ್ ಎರಡನೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಬ್ಯಾಟಿಂಗ್ ನಲ್ಲಿ ಕೇವಲ 1 ಎಸೆತ ಎದುರಿಸಿ 2 ರನ್ ಗಳಿಸಿ ಅಜೇಯವಾಗುಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News