ಐಎಸ್ಎಲ್: ಜೆಮ್ಶೆಡ್ ಪುರ- ಒಡಿಶಾ ಪಂದ್ಯ 2-2 ಡ್ರಾ

Update: 2020-11-29 17:08 GMT

ವಾಸ್ಕೋ: ಜೆಮ್ಶೆಡ್ಪುರ - ಒಡಿಶಾ ನಡುವೆ ರವಿವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್) ಪಂದ್ಯವು 2-2 ಗೋಲುಗಳ ಅಂತರದಿಂದ ಡ್ರಾನಲ್ಲಿ ಅಂತ್ಯವಾಗಿದೆ.

ಜೆಮ್ಶೆಡ್ಪುರ ಪರವಾಗಿ ವಲ್ಸ್ ಕಿಸ್(12ನೇ, 27ನೇ ನಿಮಿಷ) ಹಾಗೂ ಒಡಿಶಾದ ಪರ ಡಿಯಾಗೊ ಮೌರಿಸಿಯೊ(77, 93ನೇ ನಿಮಿಷ)ತಲಾ ಎರಡು ಗೋಲುಗಳನ್ನು ಗಳಿಸಿ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳಲು  ಕಾರಣರಾದರು.

ವಾಲ್ಸ್ ಕಿಸ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಜೆಮ್ಶೆಡ್ಪುರಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 27ನೇ ನಿಮಿಷದಲ್ಲಿ ಮತ್ತೊಂದು ಗೋಲುಗಳಿಸಿದ ವಾಲ್ಸ್ ಕಿಸ್ ತನ್ನ ತಂಡ ಮೊದಲಾರ್ಧದಂತ್ಯಕ್ಕೆ 2-0 ಮುನ್ನಡೆ ಸಾಧಿಸಲು ನೆರವಾದರು.

ಒಡಿಶಾ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಲು ಯಶಸ್ವಿಯಾಯಿತು. ಡಿಯಾಗೊ ಮೌರಿಸಿಯೊ 77ನೇ ನಿಮಿಷ ಹಾಗೂ ಹೆಚ್ಚುವರಿ ಸಮಯ(90_3)ದಲ್ಲಿ ಗೋಲು ಗಳಿಸಿ ಸ್ಕೋರನ್ನು 2-2 ರಿಂದ ಸಮಬಲ ಸಾಧಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News