22,000 ರನ್ ಮೆಲುಗಲ್ಲು ದಾಟಿದ ವಿರಾಟ್ ಕೊಹ್ಲಿ

Update: 2020-11-29 17:50 GMT

ಸಿಡ್ನಿ, ನ.29: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

 ಆಸ್ಟ್ರೇಲಿಯ ವಿರುದ್ಧ ಎರಡನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 11 ರನ್‌ಗಳ ಅಂತರದಲ್ಲಿ ಶತಕದ ಬರ ನಿವಾರಿಸುವಲ್ಲಿ ಎಡವಿದರೂ, ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೊಂದು ದಾಖಲೆ ನಿರ್ಮಿಸಿದರು. 2019 ನವೆಂಬರ್‌ನಿಂದ ಶತಕದ ಬರ ಎದುರಿಸುತ್ತಿರುವ ಕೊಹ್ಲಿ ಈ ಪಂದ್ಯದಲ್ಲಿ 89 ರನ್ ಗಳಿಸಿ ಔಟಾದರು.

418ನೇ ಪಂದ್ಯದಲ್ಲಿ ಕೊಹ್ಲಿ ರನ್‌ನ್ನು 22,011ಕ್ಕೆ ಏರಿಸಿದ್ದಾರೆ. ಕೊಹ್ಲಿ ಈ ಸಾಧನೆ ಮಾಡಿದ ಭಾರತದ ಮೂರನೇ ಬ್ಯಾಟ್ಸ್‌ಮನ್. ಸಚಿನ್ ತೆಂಡುಲ್ಕರ್ (664 ಪಂದ್ಯಗಳಲ್ಲಿ 34,357 ರನ್) ಮತ್ತು ರಾಹುಲ್ ದ್ರಾವಿಡ್ (509 ಪಂದ್ಯಗಳಲ್ಲಿ 24,208 ರನ್) ಅವರು 22 ಸಾವಿರಕ್ಕೂ ಅಧಿಕ ರನ್ ಗಳಿಸಿದ ಭಾರತದ ಬ್ಯಾಟ್ಸ್ ಮನ್‌ಗಳ ಪೈಕಿ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 8ನೇ ಬ್ಯಾಟ್ಸ್‌ಮನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News