ಕಿವೀಸ್‌ಗೆ 72 ರನ್‌ಗಳ ಜಯ

Update: 2020-11-29 17:51 GMT

ವೆಲ್ಲಿಂಗ್ಟನ್, ನ.29: ಗ್ಲೇನ್ ಫಿಲಿಫ್ಸ್ ವೇಗದ ಶತಕದ ನೆರವಿನಲ್ಲಿ ನ್ಯೂಝಿಲ್ಯಾಂಡ್ ತಂಡ ಇಲ್ಲಿ ನಡೆದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 72 ರನ್‌ಗಳ ಜಯ ಗಳಿಸಿದೆ.ಇದಕ್ಕುತ್ತರವಾಗಿ ವೆಸ್ಟ್ ಇಂಡೀಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 166 ರನ್ ಗಳಿಸಿತು. ನ್ಯೂಝಿಲ್ಯಾಂಡ್ ತಂಡ ಗ್ಲೇನ್ ಫಿಲಿಪ್ಸ್ 108 ರನ್(51ಎ, 10ಬೌ,8ಸಿ) ಮತ್ತು ಕಾನ್ವೇ 65ರನ್ ಮತ್ತು ಗಪ್ಟಿಲ್ 34 ರನ್ ನೆರವಿನಲ್ಲಿ 20 ಓವರ್‌ಗಳಲ್ಲಿ 238 ರನ್ ಗಳಿಸಿತ್ತು. ಫಿಲಿಫ್ಸ್ 46 ಎಸೆತಗಳಲ್ಲಿ 9ಬೌಂಡರಿ ಮತ್ತು 8 ಸಿಕ್ಸರ್ ನೆರವಿನಲ್ಲಿ ಶತಕ ದಾಖಲಿಸಿದ್ದರು. ಇದೇ ಕ್ರೀಡಾಂಗಣದಲ್ಲಿ ನ್ಯೂಝಿಲ್ಯಾಂಡ್‌ನ ಕಾಲಿನ್ ಮುನ್ರೊ 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 47 ಎಸೆತಗಳಲ್ಲಿ ಶತಕ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News