ಐಎಸ್ ಎಲ್: ಗೋವಾ-ನಾರ್ತ್ ಈಸ್ಟ್ ಪಂದ್ಯ ಡ್ರಾ

Update: 2020-11-30 17:14 GMT

ಪಣಜಿ: ಗೋವಾ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ನಡುವಿನ ಐಎಸ್ ಎಲ್ ಪಂದ್ಯವು 1-1 ರಿಂದ ಡ್ರಾ ಆಗಿದೆ.

ಸೋಮವಾರ ನಡೆದ ಪಂದ್ಯದಲ್ಲಿ ನಾರ್ತ್ ಈಸ್ಟ್ ಆಟಗಾರ ಇದ್ರಿಸ್ಸಾ ಸೈಲಾ ಪೆನಾಲ್ಟಿ ಕಾರ್ನರ್ ನಲ್ಲಿ 40ನೇ ನಿಮಿಷದಲ್ಲಿ ಗೋಲು ಗಳಿಸಿದರು.

ಮೂರು ನಿಮಿಷದ ಬಳಿಕ ತಿರುಗೇಟು ನೀಡಲು ಯಶಸ್ವಿಯಾದ ಗೋವಾ 1-1 ರಿಂದ ಸಮಬಲಗೊಳಿಸಿತು. 43ನೇ ನಿಮಿಷದಲ್ಲಿ ಇಗೊರ್ ಆ್ಯಂಗುಲೊ ಗೋಲು ಗಳಿಸಿ ಗೋವಾ ಸ್ಕೋರನ್ನು ಸಮಬಲಗೊಳಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News