×
Ad

ಬಹರೈನ್ ಜಿಪಿ ಜಯಿಸಿದ ಹ್ಯಾಮಿಲ್ಟನ್

Update: 2020-11-30 23:56 IST

ಮನಾಮ, ನ.30: ಇಲ್ಲಿ ನಡೆದ ಬಹರೈನ್ ಗ್ರಾನ್ ಪ್ರಿ ಚಾಂಪಿಯನ್‌ಶಿಫ್‌ನಲ್ಲಿ ಫ್ರೆಂಚ್ ರೊಮೈನ್ ಗ್ರೋಸ್ಜೀನ್ ಕಾರು ಅಪಘಾತಕ್ಕೀಡಾಗಿ, ಬೆಂಕಿ ಹತ್ತಿ ಕೊಂಡರೂ ಅವರು ಅಪಾಯದಿಂದ ಪಾರಾಗಿದ್ದಾರೆ.

ಈ ರೇಸ್‌ನಲ್ಲಿ ಎಫ್‌ಒನ್ ಚಾಂಪಿಯನ್ ಮರ್ಸಿಡಿಸ್ ಚಾಲಕ ಲೂವಿಸ್ ಹ್ಯಾಮಿಲ್ಟನ್ ಬಹರೈನ್ ಫಾರ್ಮುಲಾ ಒನ್ ಗ್ರ್ಯಾನ್ ಪ್ರಿ ಗೆದ್ದುಕೊಂಡಿದ್ದಾರೆ. ರೊಮೈನ್ ಗ್ರೋಸ್ಜೀನ್ ಅವರ ಕಾರು ರೇಸ್ ವೇಳೆ ಸ್ಫೋಟಗೊಂಡು ಇಬ್ಭಾಗವಾಗಿ ಪಕ್ಕಕ್ಕೆ ಬಿದ್ದು ಬೆಂಕಿ ಹತ್ತಿಕೊಂಡಾಗ ಅದರೊಳಗೆ ಸಿಲುಕಿಕೊಂಡ ರೊಮೈನ್ ಸಣ್ಣ ಸುಟ್ಟಗಾಯಗಳಿಂದ ಪಾರಾಗಿದ್ದಾರೆ. 34 ವರ್ಷದ ಫ್ರೆಂಚ್ ಚಾಲಕ ರೊಮೈನ್ ಕಾರು ಮೊದಲ ಲ್ಯಾಪ್‌ನಲ್ಲಿ ನಿಯಂತ್ರಣ ತಪ್ಪಿ ತಡೆಗೋಡೆಗೆ ಅಪ್ಪಳಿಸಿ ಇಬ್ಭಾಗವಾದ ನಂತರ ಬೆಂಕಿ ಹತ್ತಿಕೊಂಡಿತು. ರೊಮೈನ್ ಗ್ರೋಸ್ಜೀನ್ ಬೆಂಕಿಯ ಜ್ವಾಲೆಯ ನಡುವೆ ಹೊರಬಂದರು. ಬಳಿಕ ಅವರನ್ನು ಹೆಲಿಕಾಪ್ಟರ್ ಮೂಲಕ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News