×
Ad

ಮ್ಯಾಚ್ ಫಿಕ್ಸಿಂಗ್: ಸ್ಪೇನ್‌ನ ಟೆನಿಸ್ ಆಟಗಾರ ಪೆರೆಝ್‌ಗೆ ಎಂಟು ವರ್ಷಗಳ ನಿಷೇಧ

Update: 2020-12-02 00:42 IST

ಮ್ಯಾಡ್ರಿಡ್: 2017ರಲ್ಲಿ ಮೂರು ಪ್ರತ್ಯೇಕ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಟೆನಿಸ್ ಆಟಗಾರ ಎನ್ರಿಕ್ ಲೋಪೆಝ್ ಪೆರೆಝ್‌ಗೆ ಟೆನಿಸ್ ಚಟುವಟಿಕೆಗಳಿಗೆ ಎಂಟು ವರ್ಷಗಳ ಕಾಲ ನಿಷೇಧ ವಿಧಿಸಲಾಗಿದೆ ಎಂದು ಟೆನಿಸ್ ಸಮಗ್ರತೆ ಘಟಕ (ಟಿಐಯು) ಮಂಗಳವಾರ ತಿಳಿಸಿದೆ.

2018ರಲ್ಲಿ ವೃತ್ತಿಜೀವನದ ಉನ್ನತ ಸಿಂಗಲ್ಸ್ ಶ್ರೇಯಾಂಕವನ್ನು (154) ಮತ್ತು ಕಳೆದ ವರ್ಷ ಅತ್ಯುತ್ತಮ ಡಬಲ್ಸ್ ಶ್ರೇಯಾಂಕವನ್ನು (135) ತಲುಪಿದ 29ರ ಹರೆಯದ ಪೆರೆಝ್‌ಗೆ 25,000 ಯುಎಸ್ ಡಾಲರ್ ದಂಡ ವಿಧಿಸಲಾಗಿದೆ. ಅವರ ವಿರುದ್ಧದ ಪ್ರಕರಣವನ್ನು 5 ನವೆಂಬರ್ 2020 ರಂದು ಭ್ರಷ್ಟಾಚಾರ ವಿರೋಧಿ ವಿಚಾರಣಾ ಅಧಿಕಾರಿ ರಿಚರ್ಡ್ ಮೆಕ್ಲಾರೆನ್ ವಿಚಾರಣೆ ನಡೆಸಿದ್ದಾರೆ ಎಂದು ಟಿಐಯು ಹೇಳಿಕೆಯಲ್ಲಿ ತಿಳಿಸಿದೆ.

ಎನ್ರಿಕ್ ಲೋಪೆಝ್ ಪೆರೆಝ್ ಟೆನಿಸ್ ಭ್ರಷ್ಟಾಚಾರ ನಿಗ್ರಹ ಕಾರ್ಯಕ್ರಮದ ನಿಯಮಗಳನ್ನು 2017ರಲ್ಲಿ ಪಂದ್ಯಾವಳಿಗಳಲ್ಲಿ ಮೂರು ಬಾರಿ ಉಲ್ಲಂಘಿಸಿದ್ದಾರೆ ಎಂದು ಟಿಐಯು ಹೇಳಿದೆ. ಆದರೆ ಇನ್ನೂ ಎರಡು ಆರೋಪಗಳು ಸಾಬೀತಾಗಿಲ್ಲ. ಪೆರೆಝ್ ಅವರನ್ನು ತಾತ್ಕಾಲಿಕವಾಗಿ 2019ರ ಡಿಸೆಂಬರ್‌ನಲ್ಲಿ ಅಮಾನತುಗೊಳಿಸಲಾಗಿತ್ತು. ಮುಂದಿನ ಎಂಟು ವರ್ಷಗಳವರೆಗೆ ಯಾವುದೇ ಅನುಮೋದಿತ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಅಥವಾ ಆಡಲು ಅವರಿಗೆ ಸಾಧ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News