ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ

Update: 2020-12-02 05:23 GMT

 ಸಿಡ್ನಿ:ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯನ್ನು ಭಾರತವು ಈಗಾಗಲೇ ಸೋತಿದ್ದರೂ ನಾಯಕ ವಿರಾಟ್ ಕೊಹ್ಲಿ ಮಾತ್ರ ಹೊಸ ಮೈಲುಗಲ್ಲನ್ನು ತಲುಪುವುದನ್ನು ಮುಂದುವರಿಸಿದ್ದಾರೆ. ರವಿವಾರ ನಡೆದ 2ನೇ ಪಂದ್ಯದಲ್ಲಿ 22,000 ಅಂತರ್‌ರಾಷ್ಟ್ರೀಯ ರನ್ ಗಳಿಸಿ ಮೈಲುಗಲ್ಲು ತಲುಪಿದ್ದ ಕೊಹ್ಲಿ ಬುಧವಾರ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ವೇಗವಾಗಿ 12,000 ರನ್ ಪೂರೈಸಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದರು.

50 ಓವರ್ ಮಾದರಿಯ ಕ್ರಿಕೆಟ್‌ನಲ್ಲಿ ವೇಗವಾಗಿ 12 ಸಾವಿರ ರನ್ ಪೂರೈಸಿರುವ ಕೊಹ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್‌ರ ದಾಖಲೆಯನ್ನು ಮುರಿದರು. ಕೊಹ್ಲಿಗೆ ಇಂದು ಈ ಸಾಧನೆ ಮಾಡಲು 23 ರನ್ ಅಗತ್ಯವಿತ್ತು. ತನ್ನ 251ನೇ ಪಂದ್ಯದಲ್ಲಿ ಕೊಹ್ಲಿ 12 ಸಾವಿರ ರನ್ ಪೂರೈಸಲು ಯಶಸ್ವಿಯಾದರು.

ಕೊಹ್ಲಿ 50 ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಸುಮಾರು 60ರ ಸರಾಸರಿಯಲ್ಲಿ 43 ಶತಕಗಳು ಹಾಗೂ 59 ಅರ್ಧಶತಕಗಳನ್ನು ಸಿಡಿಸಿದ್ದಾರೆ.
 ಈಗ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಕೊಹ್ಲಿ ಸಾಧಾರಣ ಫಾರ್ಮ್‌ನಲ್ಲಿದ್ದಾರೆ. ಸಿಡ್ನಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಕೇವಲ 21 ರನ್ ಗಳಿಸಿದ್ದ ಕೊಹ್ಲಿ ಎರಡನೇ ಪಂದ್ಯದಲ್ಲಿ 89 ರನ್ ಗಳಿಸಿದ್ದರು. ಆದರೆ, ಭಾರತವು ಈ ಪಂದ್ಯವನ್ನು ಸೋತಿತ್ತು. ಭಾರತವು ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 375 ಹಾಗೂ 390 ರನ್ ಬೆನ್ನಟ್ಟುವ ಸವಾಲು ಪಡೆದಿತ್ತು.

ವೇಗವಾಗಿ 12,000 ಏಕದಿನ ರನ್ ಪೂರೈಸಿದ ಸಾಧಕರು

ವಿರಾಟ್ ಕೊಹ್ಲಿ-251 ಪಂದ್ಯಗಳು

ಸಚಿನ್ ತೆಂಡುಲ್ಕರ್-309 ಪಂದ್ಯಗಳು

ರಿಕಿ ಪಾಂಟಿಂಗ್- 323 ಪಂದ್ಯಗಳು

ಕುಮಾರ ಸಂಗಕ್ಕರ-359 ಪಂದ್ಯಗಳು

ಸನತ್ ಜಯಸೂರ್ಯ-390 ಪಂದ್ಯಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News