×
Ad

ಹಾರ್ದಿಕ್ ಪಾಂಡ್ಯ-ಜಡೇಜ ದಾಖಲೆ ಜೊತೆಯಾಟ: ಭಾರತ 302/5

Update: 2020-12-02 13:46 IST

ಕ್ಯಾನ್‌ಬೆರ್ರಾ: ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ ದಾಖಲೆಯ ಜೊತೆಯಾಟದ ನೆರವಿನಿಂದ ಭಾರತ ತಂಡ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 302 ರನ್ ಗಳಿಸಿದೆ.
ಅಗ್ರ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ(63, 78 ಎಸೆತ, 5 ಬೌಂಡರಿ)ಗಳಿಸಿ ಉತ್ತಮ ಆರಂಭ ಒದಗಿಸಿದರೆ, ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ(ಔಟಾಗದೆ 92, 76 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ರವೀಂದ್ರ ಜಡೇಜ(ಔಟಾಗದೆ 66, 50 ಎಸೆತ, 5 ಬೌಂಡರಿ, 3 ಸಿಕ್ಸರ್)ಆರನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 108 ಎಸೆತಗಳಲ್ಲಿ 150 ರನ್ ಸೇರಿಸಿದರು.

ಈ ಇಬ್ಬರು ಆಸ್ಟ್ರೇಲಿಯ ವಿರುದ್ಧ ಏಕದಿನದಲ್ಲಿ 21 ವರ್ಷಗಳ ಹಿಂದೆ ಭಾರತ ನಿರ್ಮಿಸಿದ್ದ ದಾಖಲೆಯೊಂದನ್ನು ಮುರಿದರು. 1999ರಲ್ಲಿ ಕೊಲಂಬೊದಲ್ಲಿ ಆಸೀಸ್ ವಿರುದ್ಧ ರಾಬಿನ್ ಸಿಂಗ್ ಹಾಗೂ ಸಡಗೋಪನ್ ರಮೇಶ್ ಗಳಿಸಿದ್ದ 123 ರನ್ ದಾಖಲೆಯನ್ನು ಪಾಂಡ್ಯ-ಜಡೇಜ ಮುರಿದು ಮುನ್ನುಗ್ಗಿದರು. ಭಾರತದ ಮೊತ್ತವನ್ನು 300ರ ಗಡಿ ದಾಟಿಸಿದರು.
ಆರನೇ ಕ್ರಮಾಂಕದಲ್ಲಿ ಮತ್ತೊಮ್ಮೆ ಮಿಂಚಿದ ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಇನಿಂಗ್ಸ್(92) ಆಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News