ಐಪಿಎಲ್ ಗೆ ಇನ್ನೆರಡು ಟೀಮ್ ಸೇರ್ಪಡೆಗೆ ಚಿಂತನೆ, ಫ್ರಾಂಚೈಸಿ ಖರೀದಿಗೆ ಅದಾನಿ ಗ್ರೂಪ್ ಆಸಕ್ತಿ

Update: 2020-12-03 09:07 GMT

ಹೊಸದಿಲ್ಲಿ: ಐಪಿಎಲ್ ಗೆ ಇನ್ನೆರಡು ಹೊಸ ಫ್ರಾಂಚೈಸಿಗಳ ಸೇರ್ಪಡೆಯಲ್ಲದೆ ಭಾರತದ ಐಸಿಸಿ ಪ್ರತಿನಿಧಿ ಆಯ್ಕೆ ಹಾಗೂ ಮೂವರು ಹೊಸ ರಾಷ್ಟ್ರೀಯ ಆಯ್ಕೆಗಾರರ ನೇಮಕ ಮಾಡುವ ಕುರಿತಂತೆ ಬಿಸಿಸಿಐ ಡಿಸೆಂಬರ್ 24 ರಂದು ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ.

ನೂತನ ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದು ಸಭೆಯ ಕಾರ್ಯಸೂಚಿಯಲ್ಲಿದೆ.  ನಿಯಮಗಳ ಪ್ರಕಾರ ಎಜಿಎಂಗೆ 21 ದಿನಗಳಿಗಿಂತ ಮೊದಲು ಬಿಸಿಸಿಐ 23 ಅಂಶಗಳ ಕಾರ್ಯಸೂಚಿಯನ್ನು ಎಲ್ಲ ಕ್ರಿಕೆಟ್ ಘಟಕಗಳಿಗೆ ಕಳುಹಿಸಬೇಕಾಗಿದೆ.

ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಐಪಿಎಲ್ ತಂಡಗಳ ಸಂಖ್ಯೆಯನ್ನು 10ಕ್ಕೇರಿಸುವುದು ಅತ್ಯಂತ ಪ್ರಮುಖ ಅಂಶಗಳ  ಪೈಕಿ ಒಂದಾಗಿದೆ. ಅದಾನಿ ಗ್ರೂಪ್ ಹಾಗೂ ಸಂಜೀವ್ ಗೊಯೆಂಕಾ ಆರ್ ಪಿಜಿ(ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮಾಲಕರು)ಹೊಸ ಫ್ರಾಂಚೈಸಿಗಳನ್ನು ತನ್ನದಾಗಿಸಿಕೊಳ್ಳಲು ಆಸಕ್ತಿ ತೋರಿವೆ ಎಂದು ತಿಳಿದುಬಂದಿದೆ.

ಅಹ್ಮದಾಬಾದ್ ನಗರ ಮೂಲದ ತಂಡವು ಐಪಿಎಲ್ ಗೆ ಸೇರ್ಡಡೆಯಾಗುವುದು ನಿಶ್ಚಿತ. ಕಾನ್ಪುರ, ಲಕ್ನೊ ಅಥವಾ ಪುಣೆ ನಗರದಿಂದ 10ನೇ ತಂಡದ ಸೇರ್ಪಡೆ ಕುರಿತು ಚರ್ಚೆ ನಡೆಯಬಹುದು.

ಐಪಿಎಲ್ 2021ರಲ್ಲಿ ಎರಡು ತಂಡಗಳನ್ನು ಹೆಚ್ಚಿಸುವ ಪ್ರಸ್ತಾವಕ್ಕೆಡಿ.24 ರಂದು ನಡೆಯುವ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳ ಸಭೆಯ ವೇಳೆ ಅನುಮೋದನೆ ಸಿಗುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News