ಜಡೇಜ ಬದಲಿಗೆ ಚಹಾಲ್ ಆಡಿರುವ ಕುರಿತು ಗದ್ದಲ ಸೃಷ್ಟಿಸುವ ಅಗತ್ಯವಿರಲಿಲ್ಲ:ಗವಾಸ್ಕರ್

Update: 2020-12-04 17:23 GMT

 ಮೆಲ್ಬೋರ್ನ್, ಡಿ.4: ಪಂದ್ಯದ ವೇಳೆ ಗಾಯಗೊಂಡಿರುವ ರವೀಂದ್ರ ಜಡೇಜ ಬದಲಿಗೆ ಯಜುವೇಂದ್ರ ಚಹಾಲ್‌ರನ್ನು ಕಣಕ್ಕಿಳಿಸುವ ಕುರಿತಂತೆ ಮ್ಯಾಚ್ ರೆಫರಿಗೆ ಯಾವುದೇ ಆಕ್ಷೇಪವಿರಲಿಲ್ಲ. ಹೀಗಾಗಿ ಈ ಕುರಿತಂತೆ ಗದ್ದಲ ಸೃಷ್ಟಿಸುವ ಅಗತ್ಯವಿರಲಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

  "ಮ್ಯಾಚ್ ರೆಫರಿ ಡೇವಿಡ್ ಬೂನ್ ಆಸ್ಟ್ರೇಲಿಯದವರು. ಅವರು ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ. ಜಡೇಜ ಬದಲಿಗೆ ಚಹಾಲ್ ಆಡುವುದನ್ನು ಅವರು ಒಪ್ಪಿದ್ದಾರೆ. ಚಹಾಲ್ ಆಲ್‌ರೌಂಡರ್ ಅಲ್ಲ ಎಂದು ನೀವು ವಾದಿಸಬಹುದು.ನನ್ನ ಪ್ರಕಾರ 1 ಅಥವಾ 100 ರನ್ ಗಳಿಸಲಿ ಆತ ಆಲ್‌ರೌಂಡರ್. ಆಸ್ಟ್ರೇಲಿಯದ ಮ್ಯಾಚ್ ರೆಫರಿಯವರೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಾಗಿ ಈ ಬಗ್ಗೆ ಇಂತಹ ಗದ್ದಲ ಮಾಡುವುದು ಏಕೆ?. ಐಸಿಸಿ ನಿಯಮದ ಪ್ರಕಾರವೇ ಚಹಾಲ್‌ಗೆ ಆಡಲು ಅವಕಾಶ ನೀಡಲಾಗಿದೆ. ಚಹಾಲ್ ಅವರು ಜಡೇಜ ಬದಲಿಗೆ ಆಡಿರುವುದರಿಂದ ಯಾವುದೇ ಸಮಸ್ಯೆ ಇಲ್ಲ''ಎಂದು ಗವಾಸ್ಕರ್ ಹೇಳಿದರು.

ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಜಡೇಜರ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿದ ಕಾರಣ ಗಾಯಗೊಂಡಿರುವ ಜಡೇಜ ಬದಲಿಗೆ ಚಹಾಲ್‌ಗೆ ಆಡಲು ಅವಕಾಶ ನೀಡಿರುವ ರೆಫರಿಯ ಕ್ರಮಕ್ಕೆ ಆಸ್ಟ್ರೇಲಿಯ ಕೋಚ್ ಜಸ್ಟಿನ್ ಲ್ಯಾಂಗರ್ ಅಸಮಾಧಾನ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News