×
Ad

ಐಎಸ್ ಎಲ್: ಮುಂಬೈ, ಗೋವಾಕ್ಕೆ ಜಯ

Update: 2020-12-06 22:37 IST

ಪಣಜಿ: ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್)ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಮುಂಬೈ ಸಿಟಿ ಹಾಗೂ ಗೋವಾ ಎಫ್ ಸಿ ತಂಡಗಳು ಜಯಭೇರಿ ಬಾರಿಸಿವೆ.

ಒಡಿಶಾ ವಿರುದ್ಧ ಪಂದ್ಯದಲ್ಲಿ ಮುಂಬೈ 2-0 ಅಂತರದಿಂದ ಜಯ ಸಾಧಿಸಿದೆ. ಬರ್ಥೊಲೊಮಿವ್ ಪೆನಾಲ್ಟಿ ಕಾರ್ನರ್ ನಲ್ಲಿ 30ನೇನಿಮಷದಲ್ಲಿ ಗೋಲು ಗಳಿಸಿದರು. ರೌವ್ಲಿನ್ ಬೊರ್ಗೆಸ್ 45ನೇ ನಿಮಿಷದಲ್ಲಿ ಗೋ ಲುಗಳಿಸಿದರು.

ಕೇರಳ ಬ್ಲಾಸ್ಟರ್ಸ್ ವಿರುದ್ಧದ ಮತ್ತೊಂದು ಪಂದ್ಯದಲ್ಲಿ ಆತಿಥೇಯ ಗೋವಾ ತಂಡ 3-1 ಅಂತರದ ಭರ್ಜರಿ ಜಯ ದಾಖಲಿಸಿದೆ.  ಈ ಋತುವಿನಲ್ಲಿ ಮೊದಲ ಗೆಲುವು ದಾಖಲಿಸಿತು.

ಇಗೊರ್ ಅಂಗುಲೊ 30ನೇ ಹಾಗೂ 90(4)ನೇನಿಮಿಷದಲ್ಲಿ ಅವಳಿ ಗೋಲು ಗಳಿಸಿದರೆ, ಜಾರ್ಜ್ ಬರಿಟ್ಜ್ ಮೆಂಡೊಝಾ 52ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಕೇರಳದ ಪರವಾಗಿ ವಿನ್ಸೆಂಟ್ ಗೊಮೆಝ್ 90ನೇ ನಿಮಿಷದಲ್ಲಿ ಸಮಾಧಾನಕರ ಗೋಲು ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News