×
Ad

ಎಬಿಡಿ ಶೈಲಿಯ ಹೊಡೆತದಿಂದ ಗಮನ ಸೆಳೆದ ವಿರಾಟ್ ಕೊಹ್ಲಿ

Update: 2020-12-06 23:19 IST

ಸಿಡ್ನಿ: ಆಸ್ಟ್ರೇಲಿಯ ವಿರುದ್ಧದ 6 ವಿಕೆಟ್ ಗಳಿಂದ ಗೆದ್ದಿರುವ 2ನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಆ್ಯಂಡ್ರೂ ಟೈ ಬೌಲಿಂಗ್ ನಲ್ಲಿ ಈ ತನಕ ಆಡದ ಸ್ಕೂಪ್ ಶಾಟ್ ಮೂಲಕ  ಚೆಂಡನ್ನು ಸಿಕ್ಸರ್ ಗೆ ಅಟ್ಟಿದ್ದಾರೆ. ಎಬಿಡಿ ಶಾಟ್ ಎಂದೇ ಪ್ರಸಿದ್ಧಿ ಪಡೆದಿರುವ ಸ್ಕೂಪ್ ಶಾಟ್ ಗೆ ಐಪಿಎಲ್ ಮಾಜಿ ಸಹ ಆಟಗಾರ ವಿಲಿಯರ್ಸ್ ಅವರ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿರುವುದಾಗಿ ಪ್ರಶ್ನೆಯೊಂದಕ್ಕೆ ಕೊಹ್ಲಿ ಉತ್ತರಿಸಿದ್ದಾರೆ.

ಶಿಖರ್ ಧವನ್(52), ಹಾರ್ದಿಕ್ ಪಾಂಡ್ಯ ಅವರ ಬಿರುಸಿನ ಬ್ಯಾಟಿಂಗ್ ಸಹಾಯದಿಂದ ಭಾರತವು 6 ವಿಕೆಟ್ ಗಳಿಂದ ಪಂದ್ಯವನ್ನು ಜಯಿಸಿದೆ. ಇದು ಭಾರತ ಗೆದ್ದಿರುವ ಸತತ 10ನೇ ಟ್ವೆಂಟಿ-20 ಪಂದ್ಯವಾಗಿದೆ.

ನಾನು ಬಾರಿಸಿದ್ದ ಸ್ಕೂಪ್ ನಿಜವಾಗಿಯೂ ಎಬಿಡಿ ಶಾಟ್ ಆಗಿತ್ತು. ಬೌಲರ್ ಟೈ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ನಾನು ಹಾರ್ದಿಕ್ ಗೆ ಹೇಳಿದ್ದೆ. ಆಗ ಅವರು ನಾನು ಕೂಡ ಇದನ್ನು ನಿರೀಕ್ಷಿಸಿರಲಿಲ್ಲ ಎಂದರು. ಇಂದು ರಾತ್ರಿ ಎಬಿಡಿಗೆ ಟೆಕ್ಸ್ಟ್ ಮಾಡುತ್ತೇನೆ. ಅವರು ಅದರ ಬಗ್ಗೆ ಏನು ಯೋಚಿಸುತ್ತಾರೆ ಎಂದು ನೋಡುವೆ ಎಂದು ಟೈ ಅವರ ಓವರ್ ನಲ್ಲಿ ಬಾರಿಸಿದ್ದ ಸ್ಕೂಪ್ ಶಾಟ್ ಕುರಿತ ಪ್ರಶ್ನೆಯೊಂದಕ್ಕೆ ಕೊಹ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News