ಐಎಸ್‌ಎಲ್: ಸತತ ನಾಲ್ಕನೇ ಜಯ ದಾಖಲಿಸಿದ ಮುಂಬೈ ಸಿಟಿ

Update: 2020-12-09 17:16 GMT

ಬಂಬೊಲಿಮ್: ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ನಲ್ಲಿ ತನ್ನ ಕನಸಿನ ಓಟವನ್ನು ಮುಂದುವರಿಸಿದ್ದು, ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಸತತ ನಾಲ್ಕನೇ ಜಯ ದಾಖಲಿಸಿತು.

ಮುಂಬೈ ಪರ ಹೆರ್ನಾನ್ ಸಂಟಾನಾ(45+4) ಹಾಗೂ ಆ್ಯಡಮ್ ಫಾಂಡ್ರೆ(75ನೇ ನಿ.)ತಲಾ ಒಂದು ಗೋಲು ಗಳಿಸಿದರೆ, ಚೆನ್ನೈಯಿನ್ ಪರ ಜಾಕಬ್ ಸಿಲ್ವೆಸ್ಟರ್ 40ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.

ಮುಂಬೈ ಸಿಟಿ ಎಫ್‌ಸಿ ಇದೀಗ ಎರಡನೇ ಸ್ಥಾನದಲ್ಲಿರುವ ನಾರ್ಥ್ ಈಸ್ಟ್ ಯುನೈಟೆಡ್ ಎಫ್ ಸಿ ವಿರುದ್ದ 3 ಅಂಕ ಮುನ್ನಡೆಯಲ್ಲಿದೆ. ಚೆನ್ನೈಯಿನ್ 8ನೇ ಸ್ಥಾನದಲ್ಲೇ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News