ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್ ಬಿಟ್ಟುಕೊಡಬೇಕಾದ ಒತ್ತಡದಲ್ಲಿ ಫೇಸ್‌ಬುಕ್

Update: 2020-12-10 16:36 GMT

ವಾಶಿಂಗ್ಟನ್, ಡಿ. 10: ಅಮೆರಿಕದ ಫೆಡರಲ್ ವ್ಯಾಪಾರ ಆಯೋಗ (ಟ್ರೇಡ್ ಕಮಿಶನ್) ಮತ್ತು ದೇಶದ ಬಹುತೇಕ ಎಲ್ಲ ರಾಜ್ಯಗಳು ಫೇಸ್‌ಬುಕ್ ವಿರುದ್ಧ ಮೊಕದ್ದವೆು ದಾಖಲಿಸಿದ್ದು, ಅದು ತನ್ನ ಬಹು ಅಮೂಲ್ಯ ಸೊತ್ತುಗಳಾದ ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್‌ಗಳನ್ನು ಮಾರಾಟ ಮಾಡಬೇಕಾದ ಒತ್ತಡಕ್ಕೆ ಒಳಗಾಗಿದೆ.

ತನ್ನ ಎದುರಾಳಿಗಳನ್ನು ಬಗ್ಗುಬಡಿಯಲು ಹಾಗೂ ಸಣ್ಣ ಎದುರಾಳಿಗಳನ್ನು ಸ್ಪರ್ಧೆಯಿಂದ ದೂರದಲ್ಲಿಡಲು ಫೇಸ್‌ಬುಕ್ ‘ಬಯ್ ಆರ್ ಬರಿ’ (ಒಂದೋ ಖರೀದಿಸು, ಇಲ್ಲವೇ ನಾಶಪಡಿಸು) ತಂತ್ರವನ್ನು ಬಳಸುತ್ತಿದೆ ಎಂದು ಅವುಗಳು ಆರೋಪಿಸಿವೆ.

ಬೃಹತ್ ತಂತ್ರಜ್ಞಾನ ಕಂಪೆನಿಗಳು ಅನುಸರಿಸುತ್ತಿರುವ ವ್ಯಾಪಾರ ಮಾದರಿಗಳಿಗಳಿಗಾಗಿ ಅವುಗಳನ್ನು ಉತ್ತರದಾಯಿಯನ್ನಾಗಿಸುವ ವಿಷಯದಲ್ಲಿ ಅಮೆರಿಕದ ಆಡಳಿತಾರೂಢ ಮತ್ತು ಪ್ರತಿಪಕ್ಷಗಳು ಕೈಜೋಡಿಸಿರುವುದನ್ನು ಈ ಮೊಕದ್ದಮೆಗಳು ಸೂಚಿಸಿವೆ.

ಫೇಸ್‌ಬುಕ್ ತನ್ನ ಎದುರಾಳಿಗಳನ್ನು ಖರೀದಿಸುತ್ತಿದೆ ಎಂಬ ಆರೋಪವನ್ನು ಈ ಮೊಕದ್ದಮೆಗಳಲ್ಲಿ ಮುಖ್ಯವಾಗಿ ಮಾಡಲಾಗಿದೆ. ಫೇಸ್‌ಬುಕ್ ಇನ್‌ಸ್ಟಾಗ್ರಾಮನ್ನು 2012ರಲ್ಲಿ ಒಂದು ಬಿಲಿಯ ಡಾಲರ್ (ಸುಮಾರು 7,350 ಕೋಟಿ ರೂಪಾಯಿ)ಗೆ ಖರೀದಿಸಿದ್ದರೆ, ವಾಟ್ಸ್‌ಆ್ಯಪನ್ನು 2014ರಲ್ಲಿ 19 ಬಿಲಿಯ ಡಾಲರ್ (ಸುಮಾರು 1.40 ಲಕ್ಷ ಕೋಟಿ ರೂಪಾಯಿ)ಗೆ ಖರೀದಿಸಿತ್ತು.

 ಈ ಕಂಪೆನಿಗಳನ್ನು ಫೇಸ್‌ಬುಕ್‌ನಿಂದ ಬೇರ್ಪಡಿಸಬೇಕು ಎಂದು ಫೆಡರಲ್ ಮತ್ತು ರಾಜ್ಯಗಳ ನಿಯಂತ್ರಣ ಇಲಾಖೆಗಳು ಹೇಳಿವೆ. ಆದರೆ, ಈ ಖರೀದಿಗಳಿಗೆ ಫೆಡರಲ್ ಟ್ರೇಡ್ ಕಮಿಶನ್ ಅನುಮೋದನೆ ನೀಡಿರುವುದರಿಂದ, ಸುದೀರ್ಘ ಕಾನೂನು ಹೋರಾಟವೊಂದಕ್ಕೆ ಈ ಬೆಳವಣಿಗೆ ನಾಂದಿ ಹಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News