×
Ad

‘ಮನೆಗೆ ಹೋಗಲು’ ಬಯಸುತ್ತಿರುವ ಮೆಲಾನಿಯಾ

Update: 2020-12-10 22:34 IST

ವಾಶಿಂಗ್ಟನ್, ಡಿ. 10: ಚುನಾವಣಾ ಫಲಿತಾಂಶವನ್ನು ಸ್ವೀಕರಿಸಲು ನಿರಾಕರಿಸುವ ಮೂಲಕ ಅಧಿಕಾರಕ್ಕೆ ಅಂಟಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಫಲ ಪ್ರಯತ್ನಗಳನ್ನು ನಡೆಸುತ್ತಿರುವಂತೆಯೇ, ದೇಶದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ‘ಮನೆಗೆ ಹೋಗಲು’ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ಚುನಾವಣೆಯ ವಿಷಯದಲ್ಲಿ ಟ್ರಂಪ್‌ರ ಅಭಿಪ್ರಾಯಗಳಿಗೆ ಮೆಲಾನಿಯಾ ಸಾರ್ವಜನಿಕವಾಗಿ ಬೆಂಬಲ ಸೂಚಿಸುತ್ತಿದ್ದಾರಾದರೂ, ಶ್ವೇತಭವನದ ಹೊರಗಿನ ಬದುಕಿಗೆ ಅವರು ಸಜ್ಜಾಗುತ್ತಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪ್ರಥಮ ಮಹಿಳೆಯ ಪಟ್ಟ ಬಿಟ್ಟುಕೊಟ್ಟ ಬಳಿಕ ತನಗೆ ಯಾವ ಸವಲತ್ತುಗಳು ಲಭಿಸುತ್ತವೆ ಮತ್ತು ಎಷ್ಟು ಜನ ಸಿಬ್ಬಂದಿ ಇರುತ್ತಾರೆ ಎನ್ನುವುದನ್ನು ಖಚಿತವಾಗಿ ತಿಳಿದುಕೊಳ್ಳುವಂತೆ ಅವರು ತನ್ನ ಸಹಾಯಕರೊಬ್ಬರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

‘‘ಅವರು ಈಗ ಮನೆಗೆ ಹೋಗಲು ಬಯಸುತ್ತಿದ್ದಾರೆ, ಅಷ್ಟೆ’’ ಎಂದು ಮೆಲಾನಿಯಾರ ಭಾವನೆಗಳ ಬಗ್ಗೆ ತಿಳಿದುಕೊಂಡಿರುವ ಮೂಲವೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News