×
Ad

ಒಂದೇ ನಿಮಿಷದಲ್ಲಿ ಅವಳಿ ಗೋಲು ಗಳಿಸಿದ ಸಂಟಾನ: ಹೈದರಾಬಾದ್ ಜಯಭೇರಿ

Update: 2020-12-15 21:56 IST

 ಪಣಜಿ: ಒಂದೇ ನಿಮಿಷದಲ್ಲಿ ಎರಡು ಗೋಲುಗಳನ್ನು ದಾಖಲಿಸಿ ಅಮೋಘ ಪ್ರದರ್ಶನ ನೀಡಿದ ಅರಿಡಾನೆ ಸಂಟಾನ ಸಾಹಸದಿಂದ ಹೈದರಾಬಾದ್ ಎಫ್‌ಸಿ ಈಸ್ಟ್ ಬೆಂಗಾಳ ಎಫ್‌ಸಿ ವಿರುದ್ಧ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ನಲ್ಲಿ 3-2 ಗೋಲುಗಳ ಅಂತರದಿಂದ ರೋಚಕ ಜಯ ದಾಖಲಿಸಿತು.

ತಿಲಕ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸಂಟಾನ 56ನೇ ನಿಮಿಷದಲ್ಲಿ ಎರಡು ಗೋಲು ಗಳಿಸಿದರೆ, ಹಾಲಿ ಚರಣ್ ನರ್ಝರಿ 68ನೇ ನಿಮಿಷದಲ್ಲಿ ಗೋಲು ಗಳಿಸುವುದರೊಂದಿಗೆ ಹೈದರಾಬಾದ್ ಗೆಲುವು ಖಚಿತಪಡಿಸಿದರು. ಹೈದರಾಬಾದ್ ಈ ಋತುವಿವಿನಲ್ಲಿ ಎರಡನೇ ಜಯ ದಾಖಲಿಸಿತು. ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು.

ಮತ್ತೊಂದೆಡೆ ಬಂಗಾಳ ತಂಡ ಈ ಋತುವಿನಲ್ಲಿ ಇನ್ನಷ್ಟೇ ಗೆಲುವಿನ ಖಾತೆ ತೆರೆಯಬೇಕಾಗಿದೆ. 11 ತಂಡಗಳಿರುವ ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈಸ್ಟ್ ಬಂಗಾಳದ ಪರ ಜಾಕಸ್ ಮಘೋಮಾ 26ನೇ ಹಾಗೂ 81ನೇ ನಿಮಿಷದಲ್ಲಿ ಅವಳಿ ಗೋಲು ಗಳಿಸಿದರೂ ತಂಡಕ್ಕೆ ಗೆಲುವು ಒಲಿಯಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News