×
Ad

2030ರ ಏಶ್ಯನ್ ಗೇಮ್ಸ್ ಗೆ ದೋಹಾ ಆತಿಥ್ಯ: ಒಸಿಎ ಪ್ರಕಟ

Update: 2020-12-16 21:07 IST

ಮಸ್ಕತ್, ಡಿ.16:2030ರ ಏಶ್ಯನ್ ಗೇಮ್ಸ್ ಗೆ ದೋಹಾ ಆತಿಥ್ಯವಹಿಸಿಕೊಳ್ಳಲಿದ್ದು, 2034ರ ಆವೃತ್ತಿಯ ಗೇಮ್ಸ್ ಗೆ ರಿಯಾದ್ ಆತಿಥ್ಯವಹಿಸಿಕೊಳ್ಳಲಿದೆ. ಈ ಸಂಬಂಧ ಉಭಯ ದೇಶಗಳ ನಡುವೆ ಒಪ್ಪಂದವಾಗಿದೆ ಒಲಿಂಪಿಕ್ಸ್ ಕೌನ್ಸಿಲ್ ಆಫ್ ಏಶ್ಯ (ಒಸಿಎ) ಬುಧವಾರ ಪ್ರಕಟಿಸಿದೆ.

"ಗರಿಷ್ಟ ಮತಗಳನ್ನು ಪಡೆದಿರುವ ದೋಹಾ ನಗರ 2030ರ ಏಶ್ಯನ್ ಗೇಮ್ಸ್ ನ್ನು ಆತಿಥ್ಯವಹಿಸಿಕೊಳ್ಳಲಿದೆ ಎಂದು ನಾನು ಈಗ ಘೋಷಿಸುತ್ತಿದ್ದೇನೆ. 2034ರ ಆವೃತ್ತಿಯ ಗೇಮ್ಸ್ ಗೆ ಆತಿಥ್ಯವಹಿಸುವ ಎರಡನೇ  ನಗರ ರಿಯಾದ್ ಆಗಿದೆ’’ ಎಂದು ಒಸಿಎ ಅಧ್ಯಕ್ಷ ಶೇಖ್ ಅಹ್ಮದ್ ಅಲ್-ಫಹಾದ್ ಅಲ್-ಸಬಾ ಹೇಳಿದ್ದಾರೆ.

ಆನ್ ಲೈನ್ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಕಾರಣ ಮತದಾನದ ಪ್ರಕ್ರಿಯೆ ಗಂಟೆಗಳ ಕಾಲ ವಿಳಂಬವಾಯಿತು.

"ನಾವು ಮತದಾನದ ವೇಳೆ ಎದುರಿಸಿರುವ ತಾಂತ್ರಿಕ ಸಮಸ್ಯೆಗೆ ಕ್ಷಮೆ ಕೋರುತ್ತೇನೆ. ಇಂದು ಕಠಿಣ ಸಮಸ್ಯೆ ಪರಿಹಾರವಾಗಿದೆ.ಸುಲಭವಾದ ವಿಷಯಗಳು ಸಮಸ್ಯೆಗಳಾಗಿದ್ದವು. ಪಶ್ಚಿಮ ಏಶ್ಯಾದಲ್ಲಿ ಎರಡು ಗೇಮ್ಸ್ ಗಳನ್ನು ಆಯೋಜಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ'' ಎಂದು ಶೇಕ್ ಅಹ್ಮದ್ ಹೇಳಿದ್ದಾರೆ.

ದೋಹಾ 2006ರಲ್ಲಿ ಏಶ್ಯನ್ ಗೇಮ್ಸ್ ಆತಿಥ್ಯವಹಿಸಿತ್ತು. ಸೌದಿ ಅರೇಬಿಯ ಈ ತನಕ ಒಸಿಎಯ ಬಹುಕ್ರೀಡಾ ಸ್ಪರ್ಧೆಯನ್ನು ಆಯೋಜಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News