×
Ad

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಪಾಕ್ ವೇಗಿ ಮುಹಮ್ಮದ್ ಆಮಿರ್

Update: 2020-12-17 15:51 IST

ಕರಾಚಿ,ಡಿ.17: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಆಮಿರ್ ಎಲ್ಲಾ ಪ್ರಕಾರದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. 28ರ ಹರೆಯದ ವೇಗಿ ಮುಹಮ್ಮದ್ ಆಮಿರ್, “ನನಗೆ ಈಗಿನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮಂಡಳಿಯೊಂದಿಗೆ ಮುಂದುವರಿಯಲು ಸಾಧ್ಯವಾಗುತ್ತದೆ ಅಂತ ಅನ್ನಿಸುತ್ತಿಲ್ಲ. ಹಾಗಾಗಿ ನಾನು ವಿದಾಯದ ತೀರ್ಮಾನ ಮಾಡಿದ್ದೇನೆ” ಎಂದು ಹೇಳಿಕೆ ನೀಡಿದ್ದಾರೆ.

“ಪ್ರಾಮಾಣಿಕವಾಗಿ ಹೇಳುವುದಾದರೆ ನನಗೆ ಈಗಿನ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಹೊಂದಾಣಿಕೆಯಿಂದ ಇರಲು ಸಾಧ್ಯವಾಗುತ್ತಿಲ್ಲ. ನಾನು ಕ್ರಿಕೆಟ್ ನಿಂದ ದೂರ ಸರಿಯುತ್ತಿದ್ದೇನೆ. ನನಗೆ ಮಾನಸಿಕ ಹಿಂಸೆಯಾಗುತ್ತಿದೆ. 2010 ರಿಂದ 2015ರ ಅವಧಿಯಲ್ಲಿ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಪಿಸಿಬಿಯು ನನಗಾಗಿ ಸಾಕಷ್ಟು ಹೂಡಿಕೆ ಮಾಡಿದೆ ಎಂದು ನನಗೆ ತಿಳಿದಿದೆ. ನಿಷೇಧದ ನಂತರ ತಂಡಕ್ಕೆ ಮರಳಲು ನನಗೆ ಶಾಹಿದ್ ಅಫ್ರಿದಿ ತುಂಬಾ ಸಹಾಯ ಮಾಡಿದ್ದು, ಅವರಿಗೆ ನಾನು ಆಭಾರಿಯಾಗಿದ್ದೇನೆ. ಈ ಕುರಿತಾದಂತೆ ನಾನು ಪಾಕಿಸ್ತಾನಕ್ಕೆ ಆಗಮಿಸಿದ ಬಳಿಕ ವಿವರವಾಗಿ ಹೇಳಿಕೆ ನೀಡುತ್ತೇನೆ” ಎಂದು ಆಮಿರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News