ಕುಸ್ತಿ ವಿಶ್ವಕಪ್: ಅನ್ಶು ಮಲಿಕ್‌ಗೆ ಬೆಳ್ಳಿ
ಬೆಲ್‌ಗ್ರೆಡ್, ಡಿ.17: ಕುಸ್ತಿ ವಿಶ್ವಕಪ್‌ನ 57 ಕೆಜಿ ವಿಭಾಗದಲ್ಲಿ ಭಾರತದ ಯುವ ಕುಸ್ತಿತಾರೆ ಅನ್ಶು ಮಲಿಕ್ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ, ಬೆಲ್ ಗ್ರೆಡ್ ವಿಶ್ವಕಪ್‌ನ ವೈಯಕ್ತಿಕ ವಿಭಾಗದಲ್ಲಿ ಪದಕ ಜಯಿಸಿರುವ ಭಾರತದ ಏಕೈಕ ಮಹಿಳಾ ಕುಸ್ತಿಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಜೂನಿಯರ್ ರ್ಯಾಂಕಿನಿಂದ ಬಂದಿರುವ ಅನ್ಶು ಸೀನಿಯರ್ ಮಟ್ಟದ ಮೂರನೇ ಟೂರ್ನ ಮೆಂಟ್‌ನಲ್ಲಿ ಮೂರನೇ ಪದಕವನ್ನು ಜಯಿಸಿದರು. ಬುಧವಾರ ರಾತ್ರಿ ನಡೆದ ಫೈನಲ್ ಕುಸ್ತಿ ಸ್ಪರ್ಧೆಯಲ್ಲಿ ಮೊಲ್ಡೊವಾದ ಅನಸ್ತೇಸಿಯ ನಿಚಿತಾ ವಿರುದ್ಧ 1-5 ಅಂತರದಿಂದ ಸೋಲುವುದರೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.
ವಿಶ್ಚ ಚಾಂಪಿಯನ್ ಶಿಪ್‌ನಲ್ಲಿ ಪದಕ ವಿಜೇತರಾದ ಪೂಜಾ ದಾಂಡಾ ಹಾಗೂ ಹಿರಿಯ ಕುಸ್ತಿಪಟು ಸರಿತಾ ಮೋರ್ ಉಪಸ್ಥಿತಿಯಲ್ಲಿ ಅನ್ಶು ಸಿಂಗ್ 57 ಕೆಜಿ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಸರಿತಾ(59ಕೆಜಿ), ಸೋನಂ ಮಲಿಕ್ (62ಕೆಜಿ) ಹಾಗೂ ಸಾಕ್ಷಿ ಮಲಿಕ್ (65ಕೆಜಿ)ಕ್ವಾರ್ಟರ್ ಫೈನಲ್ ಹಂತ ದಾಟಲು ವಿಫಲರಾದರು.