×
Ad

ಪೃಥ್ವಿ ಶಾ ಶೂನ್ಯಕ್ಕೆ ಔಟ್: ಸೋಶಿಯಲ್ ಮೀಡಿಯಾದಲ್ಲಿ ಕಟು ಟೀಕೆ

Update: 2020-12-17 23:46 IST

ಅಡಿಲೇಡ್, ಡಿ.17: ಇಲ್ಲಿ ಗುರುವಾರ ಆರಂಭಗೊಂಡ ಆಸ್ಟ್ರೇಲಿಯ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಯುವ ಓಪನರ್ ಪೃಥ್ವಿ ಶಾ ಎರಡನೇ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿ ಪೆವಿಯನ್ ಸೇರಿದರು. ಶಾ ಕಳಪೆ ಪ್ರದರ್ಶನದ ಕಾರಣಕ್ಕಾಗಿ ಅವರ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅವರು ಟ್ರೋಲ್‌ಗೆ ಗುರಿಯಾದರು.

ಲೋಕೇಶ್ ರಾಹುಲ್ ಮತ್ತು ಶುಭ್‌ಮನ್ ಗಿಲ್‌ಗೆ ಅವಕಾಶ ನಿರಾಕರಿಸಿ ಶಾಗೆ ಆರಂಭಿಕ ಬ್ಯಾಟ್ಸ್‌ಮನ್ ಹುದ್ದೆ ನೀಡಲಾಗಿದ್ದರೂ ಅವರು ಮಿಂಚಲು ವಿಫಲರಾದರು.

ಮಿಚೆಲ್ ಸ್ಟಾರ್ಕ್ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಶಾ ಬೌಲ್ಡ್ ಆಗಿ ಸೊನ್ನೆ ಸುತ್ತಿದರು. ಕಳೆದ ಐಪಿಎಲ್‌ನಲ್ಲಿ 13 ಪಂದ್ಯಗಳಲ್ಲಿ 17.53 ಸರಾಸರಿಯಲ್ಲಿ ಶಾ ಒಟ್ಟು 228 ರನ್ ಗಳಿಸಿದ್ದರು. ಶಾ ಅವರ ಕೊನೆಯ 8 ಐಪಿಎಲ್ ಪಂದ್ಯಗಳಲ್ಲಿ ಸ್ಕೋರ್ - 19, 4, 0, 0, 7, 10, 9 ಮತ್ತು 0 ಆಗಿತ್ತು. ಆಡುವ 11ರ ಬಳಗದಲ್ಲಿ 21ರ ಹರೆಯದ ಶಾ ಸೇರ್ಪಡೆ ಅನೇಕರಿಗೆ ಆಶ್ಚರ್ಯ ತಂದಿತ್ತು. ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಮತ್ತು ಆಸ್ಟ್ರೇಲಿಯದ ಮಾಜಿ ನಾಯಕ ಅಲನ್ ಬಾರ್ಡರ್ ಅವರು ಗಿಲ್ ಮತ್ತು ಶಾ ಚರ್ಚೆಯಲ್ಲಿ ತೂಗಿದ್ದರು. ಗಿಲ್ ಅವರು ಮಯಾಂಕ್ ಅಗರ್ವಾಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಲು ಸಮರ್ಥರು ಎಂದು ಹಲವರು ಭಾವಿಸಿದ್ದರು. ಗಿಲ್ ಎರಡನೇ ಅಭ್ಯಾಸ ಪಂದ್ಯದಲ್ಲಿ 65 ರನ್ ಗಳಿಸಿದ್ದರು. ಎರಡು ಅಭ್ಯಾಸ ಪಂದ್ಯಗಳಲ್ಲಿ ಗಿಲ್ ಅವರ ಸ್ಕೋರ್‌ಗಳು 0, 29, 43 ಮತ್ತು 65. ಇದೇ ವೇಳೆ ಶಾ, 0, 19, 40 ಮತ್ತು 3 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News