×
Ad

ಆಸ್ಟ್ರೇಲಿಯದಲ್ಲೂ ಹೊಸ ಪ್ರಭೇದದ ಕೊರೋನ ಸೋಂಕು

Update: 2020-12-21 21:54 IST

ಸಿಡ್ನಿ (ಆಸ್ಟ್ರೇಲಿಯ), ಡಿ. 21: ಬ್ರಿಟನ್‌ನಲ್ಲಿ ಪತ್ತೆಯಾಗಿರುವ, ವೇಗವಾಗಿ ಹರಡುವ ಲಕ್ಷಣವನ್ನು ಹೊಂದಿರುವ ಕೊರೋನ ವೈರಸ್‌ನ ಹೊಸ ಪ್ರಭೇದದ ಎರಡು ಪ್ರಕರಣಗಳು ಸೋಮವಾರ ಆಸ್ಟ್ರೇಲಿಯದಲ್ಲೂ ಪತ್ತೆಯಾಗಿವೆ. ಆಸ್ಟ್ರೇಲಿಯದ ನ್ಯೂಸೌತ್‌ವೇಲ್ಸ್ ರಾಜ್ಯದಲ್ಲಿ ಪತ್ತೆಯಾಗಿರುವ ನೂತನ ಪ್ರಭೇದದ ಕೊರೋನ ವೈರಸ್ ಪ್ರಕರಣಗಳು ಏಶ್ಯ-ಪೆಸಿಫಿಕ್ ವಲಯದ ಮೊದಲ ಪ್ರಕರಣಗಳಾಗಿವೆ.

ವಿದೇಶಗಳಿಂದ ಬಂದು ಕ್ವಾರಂಟೈನ್‌ನಲ್ಲಿರುವವರ ಪೈಕಿ ಆರು ಮಂದಿಯಲ್ಲಿ ರವಿವಾರ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ. ಈ ಪೈಕಿ ಎರಡು ಪ್ರಕರಣಗಳು ಕೊರೋನ ವೈರಸ್‌ನ ಹೊಸ ಪ್ರಭೇದಕ್ಕೆ ಸಂಬಂಧಿಸಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ನ್ಯೂಸೌತ್‌ವೇಲ್ಸ್‌ನ ಮುಖ್ಯ ಆರೋಗ್ಯ ಅಧಿಕಾರಿ ಕೆರಿ ಚಾಂಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News