×
Ad

ಕೊರೋನ ಲಸಿಕೆಗಳ ಮೇಲೆ ದರೋಡೆಕೋರರ ಕಣ್ಣು: ಇಂಟರ್‌ಪೋಲ್ ಮುಖ್ಯಸ್ಥ ಎಚ್ಚರಿಕೆ

Update: 2020-12-21 22:37 IST
ಪೋಟೊ ಕೃಪೆ: twitter.com

ಬರ್ಲಿನ್ (ಜರ್ಮನಿ), ಡಿ. 21: ಕೊರೋನ ವೈರಸ್ ಸಾಂಕ್ರಾಮಿಕವನ್ನು ತಡೆಯುವ ಅಮೂಲ್ಯ ಲಸಿಕೆಗಳ ಮೇಲೆ ದರೋಡೆಕೋರರು ಕಣ್ಣುಹಾಕಿದ್ದು, ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಇಂಟರ್‌ಪೋಲ್ ಮುಖ್ಯಸ್ಥ ಜಾರ್ಗನ್ ಸ್ಟಾಕ್ ಸೋಮವಾರ ಎಚ್ಚರಿಸಿದ್ದಾರೆ.

‘‘ಲಸಿಕೆಗಳು ಹೊರಬರುತ್ತಿರುವಂತೆಯೇ, ಅಪರಾಧಗಳು ನಾಟಕೀಯ ರೀತಿಯಲ್ಲಿ ಹೆಚ್ಚಲಿವೆ’’ ಎಂದು ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಟಾಕ್ ಹೇಳಿದರು.

‘‘ಲಸಿಕೆಗಳ ಕಳ್ಳತನಗಳು, ಲಸಿಕೆಗಳನ್ನು ಸಂಗ್ರಹಿಸುವ ಉಗ್ರಾಣಗಳಿಗೆ ಕನ್ನ, ಲಸಿಕೆಗಳನ್ನೊಳಗೊಂಡ ಸರಕುಗಳ ಮೇಲೆ ನಡೆಯುವ ದಾಳಿಗಳನ್ನು ನಾವು ನೋಡಲಿದ್ದೇವೆ’’ ಎಂದರು.

ಕೋವಿಡ್-19 ಲಸಿಕೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯ ಭ್ರಷ್ಟಾಚಾರ ಪ್ರಕರಣಗಳು ವರದಿಯಾಗಲಿವೆ ಎಂದು ಪ್ಯಾರಿಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಇಂಟರ್‌ಪೋಲ್‌ನ ಮಹಾ ಕಾರ್ಯದರ್ಶಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News