ಬ್ರಿಟನ್ ವಿಮಾನಗಳನ್ನು ರದ್ದುಪಡಿಸಿದ ಹಾಂಕಾಂಗ್
Update: 2020-12-21 23:38 IST
ಹಾಂಕಾಂಗ್, ಡಿ. 21: ಬ್ರಿಟನ್‌ನಲ್ಲಿ ಕೊರೋನ ವೈರಸ್‌ನ ನೂತನ ಪ್ರಭೇದ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಆ ದೇಶದಿಂದ ಬರುವ ಎಲ್ಲ ವಿಮಾನಗಳನ್ನು ನಿಷೇಧಿಸುವುದಾಗಿ ಹಾಂಕಾಂಗ್ ಸೋಮವಾರ ಹೇಳಿದೆ.
‘‘ಸೋಮವಾರ ಮಧ್ಯರಾತ್ರಿಯ ಬಳಿಕ ಬ್ರಿಟನ್‌ನಿಂದ ಯಾವುದೇ ಪ್ರಯಾಣಿಕ ವಿಮಾನವು ಹಾಂಕಾಂಗ್‌ಗೆ ಬರುವುದಿಲ್ಲ’’ ಎಂದು ಹಾಂಕಾಂಗ್ ಆರೋಗ್ಯ ಕಾರ್ಯದರ್ಶಿ ಸೋಫಿಯಾ ಚಾನ್ ಸುದ್ದಿಗಾರರಿಗೆ ತಿಳಿಸಿದರು.